ನಿಮಗೆ ತಿಳಿದಿರಲಿ ಪೂಜೆ ನಂತರದ ತೀರ್ಥ ಸೇವನೆ ಮಹತ್ವ

ದೇವರ ಆರಾಧನೆಯು ಮನಸ್ಸಿಗೆ ನೆಮ್ಮದಿ ಹಾಗೂ ದೃಢತೆಯನ್ನು ಕೊಡುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಮನೆ ಅಥವಾ ದೇವಸ್ಥಾನದಲ್ಲಿ ಪೂಜೆಯ ನಂತರ ತೀರ್ಥ ಸೇವನೆ ಕಡ್ಡಾಯವಾಗಿ ಮಾಡುವುದು ರೂಢಿ. ತೀರ್ಥ ಸೇವನೆಯ ಹಿಂದೆ ಹಲವು ಕಾರಣಗಳಿವೆ.

ದೇವರ ದರ್ಶನದ ನಂತರ ತೀರ್ಥ ಪ್ರಸಾದ ಸೇವಿಸದೇ ಹಾಗೆಯೇ ಹೋಗಬಾರದು ಎಂಬ ನಿಯಮ ಇದೆ. ಇದು ಅಗೌರವ ಸೂಚಕ ಕೂಡ ಹೌದು. ತೀರ್ಥದಲ್ಲಿ ಅಡಗಿರುವ ಉಪಯುಕ್ತ ಅಂಶಗಳ ಬಗ್ಗೆ ತಿಳಿದರೆ ನಿಮಗೆ ಅಚ್ಚರಿಯಾಗುತ್ತದೆ.

ತೀರ್ಥ ಎನ್ನುವುದು ಜಲ ರೂಪದ ಪ್ರಸಾದ. ಜಲವನ್ನ “ಜೀವ ಜಲ” ಅಂತಲೂ ಕರೆಯುತ್ತಾರೆ. ತೀರ್ಥದಲ್ಲಿ ಪ್ರಾಣಶಕ್ತಿ ಅಡಗಿದೆ ಎಂದರ್ಥ. ನಾವು ಸೇವಿಸುವ ತೀರ್ಥ ಒಂದೆರಡು ಗುಟುಕೇ ಆದರೂ ಅದನ್ನು ಸೇವನೆ ಮಾಡಿದಾಗ ಮನಸ್ಸು ನಿರ್ಮಲ ಭಾವವನ್ನು ತಳೆಯುತ್ತದೆ.

ಇದು ತತ್ ಕ್ಷಣದ ಬಾಯಾರಿಕೆಯನ್ನು ನಿವಾರಿಸುವುದಲ್ಲದೇ ತೀರ್ಥದಲ್ಲಿ ಬಳಸುವ ತುಳಸಿ ಮತ್ತು ಪಚ್ಚ ಕರ್ಪೂರ ದೇಹಕ್ಕೆ ಹೊಸ ಚೈತನ್ಯವನ್ನು ಒದಗಿಸಿ ಬಳಲಿಕೆ ಶಮನ ಮಾಡುತ್ತದೆ. ತುಳಸಿ ಹಾಗೂ ಕರ್ಪೂರ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದೇ.

ಸಾಮಾನ್ಯವಾಗಿ ಪೂಜೆ ಎಂದರೆ ಬೆಳ್ಳಂಬೆಳಗ್ಗೆ ತಲೆಗೆ ಸ್ನಾನ ಮಾಡಿ, ಏನನ್ನೂ ಸೇವಿಸದೇ ಪೂಜೆ ಮಾಡುವುದರಿಂದ ಉಂಟಾಗುವ ಆಯಾಸ, ತೀರ್ಥ ಸೇವನೆಯಿಂದ ಕಡಿಮೆ ಆಗಬಹುದು. ನೆಗಡಿ ಸೇರಿದ ಅನೇಕ ಸಾಂಕ್ರಾಮಿಕಗಳ ರಕ್ಷಣೆಯಲ್ಲಿ ದೇಗುಲದ ತೀರ್ಥ ಔಷಧಿಯ ರೂಪದಲ್ಲಿ ಕೆಲಸ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read