ನಿಮಗೆ ಈ ಸಮಸ್ಯೆಗಳಿದ್ದರೆ ಹೆಸರು ಬೇಳೆ ಮತ್ತು ಕಾಳನ್ನು ತಿನ್ನಬೇಡಿ, ಪ್ರಯೋಜನದ ಬದಲು ಆಗುತ್ತೆ ಅಪಾಯ…!

ಆರೋಗ್ಯಕರ ಆಹಾರದ ಪಟ್ಟಿಯಲ್ಲಿ ಬೇಳೆಕಾಳುಗಳು ಕೂಡ ಸೇರಿಕೊಳ್ಳುತ್ತವೆ. ಏಕೆಂದರೆ ಬೇಳೆಕಾಳುಗಳಲ್ಲಿ ಪ್ರೋಟೀನ್ ಹೇರಳವಾಗಿದೆ. ಇದು ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಎಲ್ಲರಿಗೂ ಹೆಸರು ಬೇಳೆ ಅಥವಾ ಹೆಸರು ಕಾಳನ್ನು ನಿಯಮಿತವಾಗಿ ಸೇವನೆ ಮಾಡುವಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಹೆಸರು ಕಾಳನ್ನು ನೆನೆಸಿ, ಮೊಳಕೆ ಬರಿಸಿ ತಿನ್ನುವುದರಿಂದಲೂ ಅನೇಕ ಪ್ರಯೋಜನಗಳಿವೆ. ಆದರೆ ಕೆಲವು ವೈದ್ಯಕೀಯ ಪರಿಸ್ಥಿತಿಗಳಲ್ಲಿ ಹೆಸರು ಬೇಳೆ ಅಥವಾ ಕಾಳನ್ನು ತಿನ್ನುವುದು ಅಪಾಯಕಾರಿ.

ಕಡಿಮೆ ರಕ್ತದೊತ್ತಡ: ಬಿಪಿ ಅಧಿಕವಾಗಿದ್ದರೆ ವೈದ್ಯರು ಹೆಸರು ಬೇಳೆ ಮತ್ತು ಕಾಳನ್ನು ಸೇವನೆ ಮಾಡುವಂತೆ ಸಲಹೆ ನೀಡುತ್ತಾರೆ. ಆದರೆ ರಕ್ತದೊತ್ತಡ ಸಾಮಾನ್ಯಕ್ಕಿಂತ ಕಡಿಮೆಯಾಗಿದ್ದಾಗ ಹೆಸರು ಬೇಳೆ ಅಥವಾ ಕಾಳನ್ನು ತಿನ್ನಬಾರದು.

ಹೊಟ್ಟೆ ಉಬ್ಬರಿಸುವುದು: ಕೆಲವರಿಗೆ ಗ್ಯಾಸ್ಟ್ರಿಕ್‌ ಮತ್ತು ಹೊಟ್ಟೆ ಉಬ್ಬರಿಸುವ ಸಮಸ್ಯೆ ಇರುತ್ತದೆ. ಅಂಥವರು ಹೆಸರು ಬೇಳೆ ಮತ್ತು ಹೆಸರು ಕಾಳಿನಿಂದ ದೂರವಿರುವುದು ಉತ್ತಮ. ಏಕೆಂದರೆ ಅದರಲ್ಲಿ ಶಾರ್ಟ್ ಚೈನ್ ಕಾರ್ಬೋಹೈಡ್ರೇಟ್‌ಗಳು ಕಂಡು ಬರುತ್ತವೆ, ಇದರಿಂದಾಗಿ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾಗಬಹುದು.

ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ : ರಕ್ತದಲ್ಲಿನ ಸಕ್ಕರೆ ಕಡಿಮೆಯಾದಾಗ ಜನರು ಸಾಮಾನ್ಯವಾಗಿ ದೌರ್ಬಲ್ಯ ಅಥವಾ ತಲೆತಿರುಗುವಿಕೆಯನ್ನು ಅನುಭವಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಹೆಸರು ಬೇಳೆ ಮತ್ತು ಕಾಳನ್ನು ತಿನ್ನಬಾರದು. ಏಕೆಂದರೆ ಅದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ ಮತ್ತು ನಂತರ ನೀವು ಮೂರ್ಛೆ ಹೋಗಬಹುದು.

ಯೂರಿಕ್ ಆಮ್ಲ: ಯೂರಿಕ್ ಆಮ್ಲದಿಂದ ತೊಂದರೆಗೊಳಗಾದವರು ಹೆಸರು ಬೇಳೆ ಅಥವಾ ಕಾಳು ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಇದು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ನಂತರ ನಿಮ್ಮ ಕೀಲುಗಳಲ್ಲಿ ನೋವು ಪ್ರಾರಂಭವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read