ಕರ್ನಾಟಕ ಕಾಂಗ್ರೆಸ್ ಶಾಸಕ ಟಿ.ಬಿ. ಜಯಚಂದ್ರ ಅವರ ಮೊಮ್ಮಗಳು, ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದು, ನಮ್ಮ ತಾತನನ್ನು ಸಚಿವರನ್ನಾಗಿ ಮಾಡುವಂತೆ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮ ಅಜ್ಜ ಸೇರ್ಪಡೆಯಾಗದ ಹಿನ್ನೆಲೆಯಲ್ಲಿ ಜಯಚಂದ್ರ ಅವರ ಮೊಮ್ಮಗಳು ಅರ್ನಾ ಸಂದೀಪ್ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, “ಪ್ರೀತಿಯ ರಾಹುಲ್ ಗಾಂಧಿಯವರೇ, ನಾನು ಟಿ.ಬಿ. ಜಯಚಂದ್ರ ಅವರ ಮೊಮ್ಮಗಳು, ನನ್ನ ತಾತ ಮಂತ್ರಿಯಾಗಲಿಲ್ಲ ಎಂದು ನನಗೆ ಬೇಸರವಾಗಿದೆ. ಅವರು ದಯೆ, ಸಾಮರ್ಥ್ಯ ಮತ್ತು ಶ್ರಮಶೀಲ ವ್ಯಕ್ತಿಯಾಗಿರುವುದರಿಂದ ಅವರು ಮಂತ್ರಿಯಾಗಬೇಕೆಂದು ನಾನು ಬಯಸುತ್ತೇನೆ” ಎಂದು ಬರೆದಿದ್ದಾರೆ.
ಶನಿವಾರ ವಿಸ್ತರಣೆಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ 24 ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದು ಹಿರಿಯ ಕಾಂಗ್ರೆಸ್ ನಾಯಕ ಟಿ.ಬಿ. ಜಯಚಂದ್ರ ಅವರು ಸಚಿವರ ಪಟ್ಟಿಯಲ್ಲಿರಲಿಲ್ಲ.
ಇದೇ ವೇಳೆ ತೀವ್ರ ಅನ್ಯಾಯವಾಗಿದೆ ಎಂದು ಆರೋಪಿಸಿ ಟಿ.ಬಿ. ಜಯಚಂದ್ರ ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು.