ನಟನೆಗೆ ವಿದಾಯ ಹೇಳ್ತಾರಾ ಸೂಪರ್ ಸ್ಟಾರ್ ರಜನಿಕಾಂತ್ ? ಕುತೂಹಲ ಮೂಡಿಸಿದ ನಿರ್ದೇಶಕ ಮಿಸ್ಕಿನ್ ಹೇಳಿಕೆ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ನೂರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸುವುದು ಸಾಮಾನ್ಯ ಸಂಗತಿ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ರಜನಿ ಅಭಿನಯದ ಸಿನಿಮಾಗಳ ವೀಕ್ಷಣೆಗೆ ಪ್ರೇಕ್ಷಕರು ಮುಗಿ ಬೀಳುತ್ತಾರೆ.

ರಜನಿಕಾಂತ್ ಈಗಾಗಲೇ 170 ಸಿನಿಮಾಗಳಲ್ಲಿ ಅಭಿನಯಿಸಿದ್ದು, 171ನೇ ಸಿನಿಮಾ ಸೆಟ್ಟೇರಲು ತಯಾರಿ ನಡೆದಿದೆ. ಲೋಕೇಶ್ ಕನಗರಾಜ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಪ್ರಸ್ತುತ ಅವರು ದಳಪತಿ ವಿಜಯ್ ಅವರ ‘ಲಿಯೋ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದು ಪೂರ್ಣಗೊಂಡ ಬಳಿಕ ರಜನಿಕಾಂತ್ ಅವರ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ.

ರಜನಿಕಾಂತ್ ಅವರ 171ನೇ ಸಿನಿಮಾದಲ್ಲಿ ತಮಿಳು ನಿರ್ದೇಶಕ ಮಿಸ್ಕಿನ್ ಕೂಡ ಅಭಿನಯಿಸುತ್ತಿದ್ದು, ಇತ್ತೀಚೆಗೆ ಮಾಧ್ಯಮ ಒಂದರ ಸಂದರ್ಶನದಲ್ಲಿ ಮಾತನಾಡುವ ವೇಳೆ ಮಿಸ್ಕಿನ್ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ವಯಸ್ಸು ಹಾಗೂ ಆರೋಗ್ಯದ ಕಾರಣಕ್ಕೆ ನಟನೆಗೆ ವಿದಾಯ ಹೇಳಲು ಸೂಪರ್ ಸ್ಟಾರ್ ರಜನಿಕಾಂತ್ ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಲೋಕೇಶ್ ಕನಗರಾಜ್ ನಿರ್ದೇಶನದ ಚಿತ್ರವೇ ಕೊನೆಯದು ಎಂದು ಹೇಳಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read