ಧನಾತ್ಮಕ ಶಕ್ತಿ ಹೆಚ್ಚಿಸಿ ಕಷ್ಟಗಳನ್ನು ದೂರ ಮಾಡುತ್ತೆ ನವಿಲು ಗರಿ

ನವಿಲುಗರಿ ನಕಾರಾತ್ಮಕ ಶಕ್ತಿಯನ್ನು ತಗ್ಗಿಸಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತೆ. ಶ್ರೀಕೃಷ್ಣ ತನ್ನ ಮುಕುಟದ ಮೇಲೆ ನವಿಲುಗರಿ ಇಟ್ಟುಕೊಂಡಿದ್ದ. ಹಾಗೆ ನವಿಲು ಗರಿಯನ್ನು ಲೇಖನಿಯಾಗಿ ಬಳಸಿಕೊಂಡು ಮಹಾಗ್ರಂಥಗಳನ್ನು ಬರೆದಿದ್ದಾರೆ. ಈ ಉದಾಹರಣೆಗಳು ನವಿಲುಗರಿ  ಎಷ್ಟು ಪವಿತ್ರ ಹಾಗೂ ನಮ್ಮ ಜೀವನದಲ್ಲಿ ಎಷ್ಟು ಮಹತ್ವ ಪಡೆದಿದೆ ಎಂಬುದನ್ನು ತಿಳಿಸುತ್ತದೆ.

ಪ್ರಾಚೀನ ಕಾಲದಿಂದಲೂ ನವಿಲು ಗರಿಯನ್ನು ಅನೇಕ ಕಾರ್ಯಗಳಿಗೆ ಬಳಸಲಾಗ್ತಾ ಇದೆ. ನವಿಲುಗರಿಗೆ ನಮ್ಮ ಕಷ್ಟಗಳನ್ನು ದೂರ ಮಾಡುವ ಶಕ್ತಿ ಇದೆ.

ಮನೆಯಲ್ಲಿ ನವಿಲುಗರಿಯನ್ನಿಡುವುದರಿಂದ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುವುದಿಲ್ಲ. ದುಷ್ಟ ಶಕ್ತಿ ಹಾಗೂ ಪ್ರತಿಕೂಲವನ್ನುಂಟು ಮಾಡುವ ಶಕ್ತಿಗಳಿಂದ ನಮ್ಮನ್ನು ರಕ್ಷಿಸುವ ಶಕ್ತಿ ನವಿಲುಗರಿಗಿದೆ.

ನವಿಲುಗರಿ ಬಳಕೆಯಿಂದ ಭೂತ-ಪ್ರೇತ, ದೃಷ್ಟಿ ಬೀಳುವುದು, ಗೃಹ ದೋಷ, ವಾಸ್ತು ದೋಷದಂತ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.’

ವಿದ್ಯಾರ್ಥಿಗಳಿಗೆ ನವಿಲುಗರಿ ಲಾಭದಾಯಕ. ನವಿಲುಗರಿಯನ್ನು ಪುಸ್ತಕದಲ್ಲಿಟ್ಟುಕೊಳ್ಳುವುದು ಬಹಳ ಒಳ್ಳೆಯದು.

ನವಿಲುಗರಿಗಳನ್ನು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ನವಿಲು ಗರಿ ಕ್ಷಯ, ಅಸ್ತಮಾ, ಪಾರ್ಶ್ವವಾಯು, ನೆಗಡಿ ಮತ್ತು ಬಂಜೆತನದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು.

ಹಾವು ಹಾಗೂ ನವಿಲು ಶತ್ರುಗಳು. ಮನೆಯಲ್ಲಿ ನವಿಲುಗರಿಯಿದ್ದರೆ ಹಾವು ಮನೆಯನ್ನು ಪ್ರವೇಶಿಸುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read