ದೇಹಾರೋಗ್ಯಕ್ಕೆ ರಾಗಿ – ಸಬ್ಬಸ್ಸಿಗೆ ಸೊಪ್ಪಿನ ಕಡಬು

ರಾಗಿ ಜೊತೆ ಸಬ್ಬಸ್ಸಿಗೆ ಸೊಪ್ಪಿನ ಕಾಂಬಿನೇಶನ್ ಸೂಪರ್ ಆಗಿರುತ್ತದೆ. ಎರಡನ್ನು ಬಳಸಿ ರೊಟ್ಟಿ ಮಾಡಿದರಂತೂ ತಿನ್ನಲು ಮಜವಾಗಿರುತ್ತದೆ. ಕೇವಲ ರೊಟ್ಟಿ ಅಷ್ಟೇ ಅಲ್ಲ ಕಡುಬು ಕೂಡ ತಯಾರಿಸಿ ಸವಿಯಬಹುದು. ಇಲ್ಲಿದೆ ಅದರ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು

ರಾಗಿ ಹಿಟ್ಟು – 2 ಬಟ್ಟಲು
ಸಬ್ಬಸಿಗೆ ಸೊಪ್ಪು – 1 ಕಟ್ಟು
ತೊಗರಿಬೇಳೆ – 1/2 ಬಟ್ಟಲು
ಈರುಳ್ಳಿ – 2
ಹಸಿ ಮೆಣಸಿನಕಾಯಿ – 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವು – 1 ಕಡ್ಡಿ
ಸಾಸಿವೆ ಜೀರಿಗೆ – 1 ಚಮಚ
ಬೆಳ್ಳುಳ್ಳಿ 4-5
ಹಸಿಕೊಬ್ಬರಿ – 1/2 ಬಟ್ಟಲು
ಹುಣಸೆರಸ – 2 ಚಮಚ
ಎಣ್ಣೆ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ದಪ್ಪ ಕಡಾಯಿಯಲ್ಲಿ ಎರಡು ಬಟ್ಟಲು ನೀರು ಹಾಕಿ ರಾಗಿ ಹಿಟ್ಟನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. ಹಿಟ್ಟು ಮುದ್ದೆಯಂತೆ ಆದಾಗ ಒಲೆಯಿಂದ ಇಳಿಸಿ ಆರಲು ಬಿಡಿ.

ಕುಕ್ಕರಿನಲ್ಲಿ ಬೇಳೆ ಮತ್ತು ಸಣ್ಣಗೆ ಹೆಚ್ಚಿದ ಸಬ್ಬಸ್ಸಿಗೆ ಸೊಪ್ಪು ಹಾಕಿ ಬೇಯಿಸಿಕೊಳ್ಳಬೇಕು. ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಕಾಯಲು ಇಟ್ಟು ಸಾಸಿವೆ, ಜೀರಿಗೆ, ಹೆಚ್ಚಿದ ಮೆಣಸಿನಕಾಯಿ, ಈರುಳ್ಳಿ, ಕುಟ್ಟಿದ ಬೆಳ್ಳುಳ್ಳಿ, ಕರಿಬೇವು ಹಾಕಿ.

ಈಗ ಮೊದಲೇ ತಯಾರಿಸಿಕೊಂಡ ಹಿಟ್ಟಿನ ಮುದ್ದೆ ಹಾಗೂ ಬೆಂದ ಬೇಳೆ, ಸಬ್ಬಸ್ಸಿಗೆ ಸೊಪ್ಪು ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇರಿಸಿ ದುಂಡಗೆ ಉಂಡೆಗಳನ್ನು ಮಾಡಿ ಮತ್ತೆ ಹಬೆಯಲ್ಲಿ ಬೇಯಿಸಿದರೆ ಸಬ್ಬಸ್ಸಿಗೆ ಸೊಪ್ಪಿನ ಕಡುಬು ತಿನ್ನಲು ರೆಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read