ದೇವಾನುದೇವತೆಗಳು ನೆಲೆಸಿರುವ ಮರ ಅಶ್ವತ್ಥ ವೃಕ್ಷ

ಸನಾತನ ಧರ್ಮದಲ್ಲಿ ಗಿಡ, ಮರಗಳಿಗೂ ಮಹತ್ವ ನೀಡಲಾಗಿದೆ. ಗಿಡ-ಮರಗಳಲ್ಲಿ ದೇವರಿರುತ್ತಾನೆ ಎಂದು ನಂಬಲಾಗಿದೆ. ಭಕ್ತರಿಂದ ಪೂಜಿಸಲ್ಪಡುವ ಮರಗಳಲ್ಲಿ ಅಶ್ವತ್ಥ ಮರ ಕೂಡ ಒಂದು. ದೇವಾನುದೇವತೆಗಳು ಈ ಮರದಲ್ಲಿ ನೆಲೆಸಿರುತ್ತಾರೆ ಎಂಬ ನಂಬಿಕೆಯಿದೆ. ಎಲ್ಲ ವೃಕ್ಷಗಳಲ್ಲಿ ನಾನು ಅಶ್ವತ್ಥ ವೃಕ್ಷವೆಂದು ಶ್ರೀಕೃಷ್ಣ ಕೂಡ ಗೀತೆಯಲ್ಲಿ ಹೇಳಿದ್ದಾನೆ.

ಸಿನಿಮಾ, ಪುಸ್ತಕ ಅಥವಾ ಭಯ ಹುಟ್ಟಿಸುವ ವಿಚಾರಗಳಲ್ಲಿ ಅಶ್ವತ್ಥ ಮರದ ಹೆಸರಿರುತ್ತದೆ. ಅಶ್ವತ್ಥ ಮರದಲ್ಲಿ ಆತ್ಮಗಳಿರುತ್ತವೆ ಎಂಬ ನಂಬಿಕೆ ಕೂಡ ಇದೆ. ಇದೇ ಕಾರಣಕ್ಕೆ ಕೆಲವರು ತಮ್ಮ ಮಕ್ಕಳನ್ನು ಅಶ್ವತ್ಥ ಮರದ ಬಳಿ ಬಿಡುವುದಿಲ್ಲ. ಆದ್ರೆ ಇದು ಸತ್ಯವಲ್ಲ. ಅಶ್ವತ್ಥ ಮರದ ಬಳಿ ಭೂತವಲ್ಲ, ದೇವಾನುದೇವತೆಗಳಿರುತ್ತಾರೆ.

ರಾತ್ರಿ ಅಶ್ವತ್ಥ ಮರದಲ್ಲಿ ದರಿದ್ರ ಇರುತ್ತದೆ. ಹಾಗಾಗಿ ರಾತ್ರಿ ಅಶ್ವತ್ಥ ಮರದ ಪೂಜೆ ಮಾಡಬಾರದು. ಸೂರ್ಯೋದಯವಾಗ್ತಿದ್ದಂತೆ ತಾಯಿ ಲಕ್ಷ್ಮಿ, ಅಶ್ವತ್ಥ ಮರದಲ್ಲಿ ನೆಲೆಸ್ತಾಳೆ. ಅಶ್ವತ್ಥ ಮರವನ್ನು ಕತ್ತರಿಸಲೂ ಜನರು ಹೆದರ್ತಾರೆ. ಅನೇಕ ಕಡೆ ಅಶ್ವತ್ಥ ಮರಕ್ಕೆ ಕೊಡಲಿ ಹಾಕುವುದಿಲ್ಲ. ಒಂದು ವೇಳೆ ಅಶ್ವತ್ಥ ಮರ ಕಡಿಯುವುದು ಅನಿವಾರ್ಯವಾದ್ರೆ ಭಾನುವಾರ ಕತ್ತರಿಸಿ ಎಂದು ಧರ್ಮದಲ್ಲಿಯೇ ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read