ದುರ್ಬಲವಾದ ಕೂದಲಿಗೆ ಮನೆಯಲ್ಲೇ ಈ ರೀತಿ ಮಾಡಿ ನೈಸರ್ಗಿಕ ಪೋಷಣೆ

ದುರ್ಬಲವಾದ ಕೂದಲಿನ ಬೇರುಗಳು ತೆಳುವಾಗಿದ್ದು, ಕೂದಲಿನ ಬ್ರೇಕೇಜ್ ಗೆ ಕಾರಣವಾಗಬಹುದು. ಇದರ ಬಗ್ಗೆ ಹೆಚ್ಚಿನ ಮಹಿಳೆಯರಿಗೆ ತಿಳಿದಿರುವುದಿಲ್ಲ. ಈ ಸಮಸ್ಯೆಗಳಿಂದ ಹೊರ ಬರಲು ಮನೆಯಲ್ಲೇ ಪಾಲಿಸಬಹುದಾದ  ನೈಸರ್ಗಿಕವಾಗಿ ಕೂದಲಿಗೆ ಪೋಷಣೆ ಮತ್ತು ಕೂದಲನ್ನು ರಿಜುವಿನೇಟ್ ಮಾಡುವಂತಹ ಕೆಲವು ಟಿಪ್ಸ್ ಇಲ್ಲಿದೆ.

ಆಲಿವ್ ಆಯಿಲ್ : ರಾತ್ರಿ ಆಲಿವ್ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಿ, ಬೆಳಿಗ್ಗೆ ನೀರಿನಿಂದ ತೊಳೆದುಕೊಳ್ಳಬೇಕು. ಕೂದಲಿಗೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು ಇದರಲ್ಲಿದ್ದು, ಇದು ಕೂದಲಿನ ಬೇರುಗಳಿಗೆ ಉತ್ತಮವಾದ ಪೋಷಣೆಯನ್ನು ನೀಡಿ, ಕೋಮಲವಾದ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ವಿಟಮಿನ್ ಇ ಆಯಿಲ್ : ವಿಟಮಿನ್ ಇ ಕ್ಯಾಪ್ಸುಲ್ ನಿಂದ ತೆಗೆದ ಆಯಿಲ್ ಅನ್ನು ಕೂದಲಿನ ಬುಡಕ್ಕೆ ಹಚ್ಚಿ, 40-60 ನಿಮಿಷಗಳವರೆಗೆ ಹಾಗೆಯೇ ಬಿಟ್ಟು, ಲೈಟ್ ಶ್ಯಾಂಪೂವಿನಿಂದ ಹೇರ್ ವಾಶ್ ಮಾಡಿಕೊಳ್ಳಿ. ವಿಟಮಿನ್ ಇ ಒಂದು ಪವರ್ಫುಲ್ ಆ್ಯಂಟಿಆಕ್ಸಿಡೆಂಟ್ ಆಗಿರುವುದರಿಂದ ಕೂದಲನ್ನು ಸ್ಟ್ರಾಂಗ್ ಮಾಡಿ ಬ್ರೇಕೇಜ್ ನಿಂದ ನಿವಾರಣೆ ನೀಡುತ್ತದೆ.

ಬಾಳೆಹಣ್ಣು : ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಸ್ಮಾಷ್ ಮಾಡಿ ಕೂದಲಿನ ಬುಡಕ್ಕೆ ಸಮವಾಗಿ ಹಚ್ಚಿ. 60 ನಿಮಿಷಗಳ ಕಾಲ ಹೀಗೆಯೇ ಬಿಟ್ಟು, ನಂತರ ಮೈಲ್ಡ್ ಶ್ಯಾಂಪೂವಿನಿಂದ ವಾಶ್ ಮಾಡಿಕೊಳ್ಳಿ. ಬಾಳೆಹಣ್ಣಿನಲ್ಲಿ ಪೋಟಾಶಿಯಂ ಮತ್ತು ಮೆಗ್ನೀಶಿಯಂ ಅಂಶ ಯಥೇಚ್ಛವಾಗಿರುವುದರಿಂದ  ಕೂದಲಿನ ರೂಟ್ಸ್ ಗೆ ಬಲವನ್ನು ನೀಡಿ ಹೇರ್ ಬ್ರೇಕೇಜ್ ಅನ್ನು ತಡೆಗಟ್ಟುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read