ದುಬೈನಲ್ಲಿ ವಿಜಯ್‌ ದೇವರಕೊಂಡ ಜೊತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ; ವೈರಲ್‌ ಆಗಿದೆ ಫೋಟೋ…..!

ದಕ್ಷಿಣದ ಖ್ಯಾತ ನಟ ವಿಜಯ್‌ ದೇವರಕೊಂಡ ದುಬೈನಲ್ಲಿ ತಮ್ಮ ಫ್ಯಾಮಿಲಿ ಜೊತೆ ರಜಾದಿನಗಳನ್ನು ಕಳೀತಿದ್ದಾರೆ. ಆದ್ರೀಗ ನಟಿ ರಶ್ಮಿಕಾ ಮಂದಣ್ಣ ಕೂಡ ವಿಜಯ್‌ ಜೊತೆ ಜಾಯಿನ್‌ ಆಗಿದ್ದಾರಂತೆ. ವಿಜಯ್‌ ಜೊತೆಗೆ ರಶ್ಮಿಕಾ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ವಿಜಯ್‌ ತಮ್ಮ ಫ್ಯಾಮಿಲಿಯೊಟ್ಟಿಗೆ ತೆಗೆಸಿಕೊಂಡಿರುವ ಫೋಟೋಗಳ ಜೊತೆಗೆ ರಷ್ಮಿಕಾ ಜೊತೆಗಿರುವ ಚಿತ್ರವೀಗ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಆದ್ರೆ ಈ ಫೋಟೋವನ್ನು ಎಡಿಟ್‌ ಮಾಡಲಾಗಿದೆಯಾ ಅನ್ನೋದು ಖಚಿತವಾಗಿಲ್ಲ. ಫೋಟೋಗಳ ಸತ್ಯಾಸತ್ಯತೆ ಇನ್ನಷ್ಟೇ ಬಹಿರಂಗವಾಗಬೇಕಿದೆ.

ವಿಜಯ್ ಮತ್ತು ರಶ್ಮಿಕಾರ ಡೇಟಿಂಗ್ ವದಂತಿಗಳು ಬಹಳ ಸಮಯದಿಂದ ಸುದ್ದಿ ಮಾಡುತ್ತಿವೆ. ಆದಾಗ್ಯೂ ಇವರಿಬ್ಬರೂ ತಮ್ಮ ಪ್ರಣಯ ಸಂಬಂಧವನ್ನು ಎಂದಿಗೂ ಖಚಿತಪಡಿಸಿಲ್ಲ. ವಿಜಯ್‌ ಜೊತೆಗೆ ರಷ್ಮಿಕಾ ಸಿಕ್ಕಾಪಟ್ಟೆ ಕ್ಲೋಸ್‌ ಆಗಿರೋದು ಎಲ್ರಿಗೂ ತಿಳಿದಿರೋ ವಿಚಾರ. ಖುದ್ದು ರಷ್ಮಿಕಾ ಇದನ್ನು ಒಪ್ಪಿಕೊಂಡಿದ್ದರು.

ಕಲಾವಿದರು ಅಂದ ಮೇಲೆ ಫೋಕಸ್‌ ನಮ್ಮ ಮೇಲಿರೋದು ಸಹಜ, ಕೆಲವೊಂದು ವಿಡಿಯೋಗಳನ್ನೆಲ್ಲ ನೋಡುತ್ತೇನೆ. ಆದ್ರೆ ನಾನು ಮತ್ತು ವಿಜಯ್ ಈ ಬಗ್ಗೆ ಚರ್ಚಿಸುವುದಿಲ್ಲ. ನಮಗೆ ಸ್ನೇಹಿತರು ಮುಖ್ಯ ಎಂದಿದ್ದರು ರಷ್ಮಿಕಾ. ರಶ್ಮಿಕಾ ಅಭಿನಯದ ಮಿಷನ್‌ ಮಜ್ನು ಚಿತ್ರ ಸದ್ಯ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿದೆ. ಮತ್ತೊಂದೆಡೆ ವಿಜಯ್ ದೇವರಕೊಂಡ, ಸಮಂತಾ ರುತ್ ಪ್ರಭು ಜೊತೆ ನಟಿಸ್ತಿದ್ದಾರೆ.

https://twitter.com/Rashmikavijay8/status/1620029582522073088?ref_src=twsrc%5Etfw%7Ctwcamp%5Etweetembed%7Ctwterm%5E1620029582522073088%7Ctwgr%5Ed219415a1fa875728d02301db96ba031a623e6b7%7Ctwcon%5Es1_&ref_url=https%3A%2F%2Fwww.news18.com%2Fnews%2Fmovies%2Fleaked-pic-rashmika-mandanna-joins-vijay-deverakonda-and-family-in-dubai-on-their-vacation-6967033.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read