ದೀಪಾವಳಿಯಲ್ಲಿ ಪಟಾಕಿ ತ್ಯಜಿಸಿ ಅಥವಾ ಹಸಿರು ಪಟಾಕಿ ಬಳಸಿ : ಸಚಿವ ಈಶ್ವರ್ ಖಂಡ್ರೆ ಕರೆ

ಡಿಜಿಟಲ್ ಡೆಸ್ಕ್ : ದೀಪಾವಳಿಯಲ್ಲಿ ಪಟಾಕಿ ತ್ಯಜಿಸಿ ಅಥವಾ ಹಸಿರು ಪಟಾಕಿ ಬಳಸಿ ಎಂದು ಸಚಿವ ಈಶ್ವರ್ ಖಂಡ್ರೆ ಕರೆ ನೀಡಿದರು.

ಅರಣ್ಯ ಇಲಾಖೆ ವತಿಯಿಂದ ಇಂದು ವಿಧಾನಸೌಧ ಮುಂಭಾಗ 71ನೇ ವನ್ಯಜೀವಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಲೆ ಮಹದೇಶ್ವರ, ಮಧುಗಿರಿ, ಬಂಡೀಪುರದಲ್ಲಿ ವನ್ಯಜೀವಿಗಳ ದುರ್ಘಟನೆಯು ನಮ್ಮನ್ನು ನೋವಿನಿಂದ ತುಂಬಿಸಿದೆ. ವನ್ಯಜೀವಿಗಳೊಂದಿಗೆ ಸಹಬಾಳ್ವೆ, ಪ್ರಕೃತಿ ಸಂರಕ್ಷಣೆ ನಮ್ಮ ಕರ್ತವ್ಯ; ಜನರಲ್ಲಿ ಜಾಗೃತಿ ಮೂಡಿಸುವುದು ಸಪ್ತಾಹದ ಉದ್ದೇಶ. ಗಾಂಧೀ ಜಯಂತಿಯ ದಿನ, ಪ್ರಕೃತಿ, ಪರಿಸರ ಉಳಿಸುವ ಮಹತ್ವವನ್ನು ನೆನಪಿಸಿಕೊಳ್ಳೋಣ.ದೀಪಾವಳಿಯಲ್ಲಿ ಪಟಾಕಿ ತ್ಯಜಿಸಿ ಅಥವಾ ಹಸಿರು ಪಟಾಕಿ ಬಳಸಿ, ಮಕ್ಕಳ ಆರೋಗ್ಯ ಮತ್ತು ಉತ್ತಮ ಪರಿಸರಕ್ಕಾಗಿ ಕೊಡುಗೆ ನೀಡೋಣ ಎಂದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ವನ್ಯಜೀವಿ ರಾಯಭಾರಿ ಅನಿಲ್ ಕುಂಬ್ಳೆ,
ಅರಣ್ಯಪಡೆ ಮುಖ್ಯಸ್ಥರು ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read