ದಿನವಿಡೀ ಕಾರಿನಲ್ಲಿ ಸುತ್ತಾಟ, ಜೊತೆಗೆ ಫ್ರೀ ಬಿಯರ್….! ಈ ಬಂಪರ್‌ ಆಫರ್‌ನ ಉದ್ಯೋಗಕ್ಕೆ ಶುರುವಾಗಿದೆ ಪೈಪೋಟಿ

ದಿನಪೂರ್ತಿ ಎಸಿ ಕಾರಿನಲ್ಲಿ ಸುತ್ತಾಡುತ್ತಾ ಉಚಿತವಾಗಿ ಬಿಯರ್ ಕುಡಿಯೋದೇ ಉದ್ಯೋಗವಾದರೆ ಹೇಗಿರುತ್ತೆ ಹೇಳಿ ? ಈ ಕೆಲಸಕ್ಕೆ ಕೈತುಂಬಾ ಸಂಬಳ ಬಂದರೆ ಎಂಥವರಿಗೂ ಜಾಕ್‌ಪಾಟ್‌ ಹೊಡೆದಂತೆ. ಈ ಅವರ ಕನಸಿನ ಉದ್ಯೋಗದ ಆಫರ್‌ ಈಗ ಬ್ರಿಟನ್‌ನಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಬ್ರಿಟನ್ ನ ದೊಡ್ಡ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ದೇಶದಾದ್ಯಂತ ಮುಕ್ತವಾಗಿ ತಿರುಗಾಡಲು ಮತ್ತು ಉಚಿತವಾಗಿ ಬಿಯರ್ ಕುಡಿಯಲು ಸಂಬಳ ನೀಡುತ್ತಿದೆ.

ಈ ಕೆಲಸದಲ್ಲಿ ಯಾವುದೇ ರೀತಿಯ ಅಪಾಯವಿಲ್ಲ, ಬದಲಿಗೆ ಉದ್ಯೋಗಿ ಮೋಜು ಮಾಡಬಹುದು. ಬ್ರಿಟ್ ಸ್ಟಾಪ್ಸ್ ಹೆಸರಿನ ಗ್ರೂಪ್‌ ಈ ಆಫರ್‌ ನೀಡಿದೆ. ಈ ಕಂಪನಿಯಲ್ಲಿ ಪಬ್‌ಗಳು, ಬ್ರೆವರೀಸ್ ಮತ್ತು ದ್ರಾಕ್ಷಿತೋಟಗಳು ಸೇರಿದಂತೆ ಸುಮಾರು 1100 ಸಣ್ಣ ವ್ಯಾಪಾರಗಳಿವೆ. ಇದಕ್ಕಾಗಿ ಕಂಪನಿ ಉದ್ಯೋಗಿಗಳ ಹುಡುಕಾಟದಲ್ಲಿದೆ. ಉದ್ಯೋಗಿ ಸ್ವತಃ ಮೋಟರ್‌ ವ್ಯಾನ್ ಅಥವಾ ಕ್ಯಾಂಪರ್‌ ವ್ಯಾನ್ ಅನ್ನು ಸ್ವತಃ ಓಡಿಸಬೇಕು. ಇಡೀ ದೇಶ ಸುತ್ತಿ ಉಚಿತವಾಗಿ ಬಿಯರ್ ಕುಡಿದು ಕಂಪನಿಗೆ ಅಪ್ ಡೇಟ್ ಕೊಡಬೇಕು. ಈ ಕೆಲಸಕ್ಕೆ ಕಚೇರಿಗೆ ಬರುವ ಅಗತ್ಯವಿಲ್ಲ.

ಈ ಉದ್ಯೋಗಕ್ಕೆ ಅರ್ಜಿ ಹಾಕುವವರ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಅವರು ಬ್ರಿಟನ್‌ನ ಮಾನ್ಯ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರಬೇಕು. ಇದಲ್ಲದೆ ಅರ್ಜಿದಾರರು ಕುಡಿದು ವಾಹನ ಚಲಾಯಿಸುವುದಿಲ್ಲ ಎಂದು ಅಫಿಡವಿಟ್ ನೀಡಬೇಕಾಗುತ್ತದೆ. ಉಳಿದ ಸಮಯದಲ್ಲಿ ಕಂಪನಿಯ ಅತ್ಯುತ್ತಮ ಪಾನೀಯವನ್ನು ಉಚಿತವಾಗಿ ಆನಂದಿಸಲು ಅವಕಾಶವಿದೆ. ಪಾಯಿಂಟ್ ಚೇಸರ್ ಪ್ರತಿ ಸ್ಥಳದಲ್ಲಿ ಒಂದು ರಾತ್ರಿಯನ್ನು ಕಳೆಯುತ್ತಾನೆ. ಅಂದರೆ, ಪಾಯಿಂಟ್ ಚೇಸರ್ ಒಂದು ರಾತ್ರಿ ಒಂದೇ ಸ್ಥಳದಲ್ಲಿ ಉಳಿಯಬೇಕಾಗುತ್ತದೆ. ಏಕೆಂದರೆ ಕಂಪನಿಯು ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ನಿಷೇಧಿಸಿದೆ.

ಆತ ಕುಡಿದಿಲ್ಲ ಎಂದು ಖಚಿತವಾದ ನಂತರ ಮಾತ್ರ ಮುಂದಿನ ಸ್ಥಳಕ್ಕೆ ಹೋಗಲು ಅವಕಾಶ ನೀಡಲಾಗುತ್ತದೆ. ಉದ್ಯೋಗಿ ದೈನಂದಿನ ಪ್ರಯಾಣದ ಪ್ರಕಾರ ಹಣವನ್ನು ಪಡೆಯುತ್ತಾನೆ. ಇದಲ್ಲದೇ ಬ್ರಿಟ್ ಸ್ಟಾಪ್ಸ್ ಆಜೀವ ಸದಸ್ಯತ್ವವನ್ನೂ ನೀಡಲಿದೆ. ಬ್ರಿಟ್ಸ್ ಸ್ಟಾಪ್ಸ್ನಲ್ಲಿ  750 ಪಬ್‌ಗಳಿವೆ. ಉತ್ತಮ ಸ್ಥಳದಲ್ಲಿ ತಂಗಲು ಉದ್ಯೋಗಿಗೆ ವ್ಯವಸ್ಥೆಯೂ ಇರುತ್ತದೆ. ಈ ಬಂಪರ್‌ ಆಫರ್‌ ಯಾರ ಪಾಲಾಗಲಿದೆ ಅನ್ನೋದೇ ಸದ್ಯದ ಕುತೂಹಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read