ದಿನವಿಡಿ ಮೂಡ್ ಸರಿಯಿರಲು ಬೆಳಗ್ಗೆ ಹೀಗೆ ಮಾಡಿ

ಬೆಳಗ್ಗೆ ಎದ್ದಾಕ್ಷಣ ಮೂಡ್ ಹಾಳಾಯ್ತು ಎಂದು ಬಹಳ ಮಂದಿ ಹೇಳಿರುವುದನ್ನು ನೀವು ಕೇಳಿರಬಹುದು. ಇಲ್ಲಿ ಕಿರಿಕಿರಿಯಾಗುವ ವಸ್ತುಗಳನ್ನು ನಮ್ಮ ದಿನಚರಿಯಿಂದ ದೂರವಿಟ್ಟರೆ ಸಾಕು, ಸಂತಸ ನೆಮ್ಮದಿ ತನ್ನಷ್ಟಕ್ಕೇ ನಿಮ್ಮ ಬಳಿ ಬರುತ್ತದೆ.

ಬೆಳಗ್ಗಿನ ಅಲರಾಂಗೆ ನಿಮ್ಮಿಷ್ಟದ ಹಾಡನ್ನು ರಿಂಗ್ ಟೋನ್ ಆಗಿ ಸೆಟ್ ಮಾಡಿಕೊಳ್ಳಿ. ಅದನ್ನು ಕೇಳಿದಾಕ್ಷಣ ನಿಮ್ಮಲ್ಲಿ ಉತ್ಸಾಹ ಚಿಮ್ಮುತ್ತದೆಯೇ ಹೊರತು ಮತ್ತೆ ಮಲಗುವ ಮನಸ್ಸಾಗದು. ಇದು ಒತ್ತಡವನ್ನೂ ಕಡಿಮೆ ಮಾಡುತ್ತದೆ ಎಂಬುದು ನೆನಪಿರಲಿ.
ಎದ್ದಾಕ್ಷಣ ಅಡುಗೆ ಮನೆಗೆ ಓಡುವ ಬದಲು ಐದು ನಿಮಿಷ ಅಂಗಳದಲ್ಲಿ ವಾಕಿಂಗ್ ಮಾಡಿ. ತಣ್ಣನೆಯ ಗಾಳಿ, ಹಕ್ಕಿಗಳ ಚಿಲಿಪಿಲಿ ಸದ್ದು ನಿಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಮೊದಲ ಐದರಿಂದ ಹತ್ತು ನಿಮಿಷವನ್ನು ನಿಮಗಾಗಿ ಮೀಸಲಿಡಿ.

ಅಡುಗೆ ಮನೆಯ ಕಿಟಕಿಗಳನ್ನು ತೆಗೆದಿಡಿ. ಕೆಲಸ ಮಾಡುತ್ತಾ ಉತ್ತಮ ಮಧುರ ಹಾಡುಗಳನ್ನು ಆಸ್ವಾದಿಸಿ. ಮೊಬೈಲ್ ನಲ್ಲಿ ವಾಟ್ಸಾಪ್, ಫೇಸ್ ಬುಕ್ ನೋಡದಿರಿ. ನ್ಯೂಸ್ ಮೇಲೆ ಕಣ್ಣಾಡಿಸಿ. ಇಂದು ಮಾಡಬೇಕಾದ ಕೆಲಸಗಳ ಬಗ್ಗೆ ಯೋಚಿಸಿ.

ಅಯ್ಯೋ ಎಷ್ಟೊಂದು ಕೆಲಸಗಳಿವೆ ಎಂದುಕೊಂಡೇ ದಿನ ಆರಂಭಿಸದಿರಿ. ಎಲ್ಲವನ್ನೂ ನಿಧಾನಕ್ಕೆ ಮಾಡೋಣ ಎಂದುಕೊಳ್ಳಿ. ಕೆಲಸಗಳು ಸರಾಗವಾಗಿ ಸಾಗುತ್ತವೆ. ಒಂದರಿಂದ ಎರಡು ಲೋಟ ಬೆಚ್ಚಗಿನ ನೀರು ಕುಡಿಯಿರಿ. ಇದು ಆರೋಗ್ಯದ ಸಮಸ್ಯೆಗಳನ್ನೂ ಪರಿಹರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read