ದಾನ ಮಾಡುವುದರಲ್ಲಿ HCL ಸಹ ಸಂಸ್ಥಾಪಕ ಶಿವನಾಡರ್ ‘ನಂಬರ್ 1’

ಫೋರ್ಸ್ 2022 ರಲ್ಲಿ ಸಾಮಾಜಿಕ ಕಾರ್ಯಗಳಿಗಾಗಿ ಅತಿ ಹೆಚ್ಚು ದೇಣಿಗೆ ನೀಡಿದ ಭಾರತೀಯ ಸಿರಿವಂತರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಹೆಚ್.ಸಿ.ಎಲ್. ಸಹ ಸಂಸ್ಥಾಪಕ ಶಿವನಾಡರ್ ಮೊದಲ ಸ್ಥಾನದಲ್ಲಿದ್ದಾರೆ.

2022 ರಲ್ಲಿ ಅವರು 1,161 ಕೋಟಿ ರೂಪಾಯಿ ದಾನ ಮಾಡಿದ್ದು, ಪ್ರತಿದಿನ ಸರಾಸರಿ ಮೂರು ಕೋಟಿ ರೂಪಾಯಿಗಳ ದೇಣಿಗೆ ನೀಡಿದಂತಾಗಿದೆ. ಈ ಪೈಕಿ ಶಿವನಾಡರ್ ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚಿನ ಕೊಡುಗೆ ನೀಡಿದ್ದಾರೆ.

ಇನ್ನು ವಿಪ್ರೋದ ಅಜೀಂ ಪ್ರೇಮ್ ಜಿ ಎರಡನೇ ಸ್ಥಾನದಲ್ಲಿದ್ದು, ಅವರು ಈ ಅವಧಿಯಲ್ಲಿ 484 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಇನ್ನುಳಿದಂತೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ 411 ಕೋಟಿ ರೂಪಾಯಿ, ಕುಮಾರ ಮಂಗಳಂ ಬಿರ್ಲಾ 242 ಕೋಟಿ ರೂಪಾಯಿ, ಗೌತಮ್ ಅದಾನಿ 190 ಕೋಟಿ ರೂಪಾಯಿ ಹಾಗೂ ಎ.ಎಂ. ನಾಯಕ್ 142 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read