ದಂಗಾಗಿಸುತ್ತೆ ನಟ ಮಹೇಶ್‌ ಬಾಬು ಪುತ್ರಿಯ ಮೊದಲ ಸಂಭಾವನೆ, ಈ ಹಣವನ್ನು ಸ್ಟಾರ್‌ ಪುತ್ರಿ ಮಾಡಿದ್ದೇನು…?

ದಕ್ಷಿಣ ಭಾರತದ ಖ್ಯಾತ ನಟರ ಪುತ್ರಿಯೊಬ್ಬಳಿಗೆ ಮೊದಲ ಜಾಹೀರಾತಿನಲ್ಲೇ ಭರ್ತಿ ಸಂಭಾವನೆ ಸಿಕ್ಕಿದೆ. ಸಂಭಾವನೆಯ ಮೊತ್ತ ಕೇಳಿದ್ರೆ ಎಲ್ಲರೂ ಶಾಕ್‌ ಆಗೋದು ಗ್ಯಾರಂಟಿ. ಬಾಲಿವುಡ್ ನಟಿ ನಮ್ರತಾ ಶಿರೋಡ್ಕರ್ ಮತ್ತು ಸೌತ್ ಸ್ಟಾರ್ ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಘಟ್ಟಮನೇನಿ ಮೊದಲ ಬಾರಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾಳೆ.

ಸಿತಾರಾಗೆ ಈಗ ಕೇವಲ 11 ವರ್ಷ. ಆಭರಣ ಬ್ರ್ಯಾಂಡ್‌ನ ಜಾಹೀರಾತೊಂದರಲ್ಲಿ ಸಿತಾರಾ ಕಾಣಿಸಿಕೊಂಡಿದ್ದಾಳೆ. ಈ ಮೂಲಕ ಮಾಡೆಲಿಂಗ್ ಜಗತ್ತಿಗೆ ಚಿಕ್ಕ ವಯಸ್ಸಿನಲ್ಲೇ ಎಂಟ್ರಿ ಕೊಟ್ಟಿದ್ದಾಳೆ. ಈ ಆಭರಣ ಬ್ರಾಂಡ್‌ನ ಮಾಡೆಲ್ ಆಗಲು ಸಿತಾರಾ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾಳೆ. ಪ್ರತಿಯೊಬ್ಬರ ಜೀವನದಲ್ಲಿ ಮೊದಲ ಗಳಿಕೆ ಬಹಳ ಮುಖ್ಯ. ವಿಶೇಷ ಅಂದ್ರೆ ಸಂಭಾವನೆಯಾಗಿ ಪಡೆದ 1 ಕೋಟಿ ರೂಪಾಯಿಯನ್ನು ಸಿತಾರಾ ದೇಣಿಗೆ ನೀಡಿದ್ದಾಳೆ.

ಇದು ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ಸಿತಾರಾಳ ಫೋಟೋಗಳು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಕಾಣಿಸಿಕೊಂಡಿವೆ. ಮಹೇಶ್ ಬಾಬು ಮತ್ತು ನಮ್ರತಾ ಕೂಡ ಮಗಳು ಸಿತಾರಾಳ ನಿರ್ಧಾರದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಸಿತಾರಾ ಸಂಭಾವನೆ ಮೊತ್ತವನ್ನು ದೇಣಿಗೆ ನೀಡಿರೋದ್ರಿಂದ ಮಗಳ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ.

ಕೇವಲ 11 ನೇ ವಯಸ್ಸಿನಲ್ಲಿ ಸಿತಾರಾ Instagramನಲ್ಲಿ 1.3 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾಳೆ. ಈ ಹಿಂದೆಯೇ ನಟ ಮಹೇಶ್‌ ಬಾಬು ಅವರೊಂದಿಗೆ ಸಿತಾರಾ, ಡಾನ್ಸ್‌ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಳು. ಹಾಲಿವುಡ್ ಚಿತ್ರ ಫ್ರೋಜನ್ 2ನ ತೆಲುಗು ಆವೃತ್ತಿಯಲ್ಲಿ ಬೇಬಿ ಎಲ್ಸಾಗೆ ಸಿತಾರಾ ಧ್ವನಿ ನೀಡಿದ್ದಾಳೆ. ಸಿತಾರಾ ಫೋಟೋ ಹಾಗೂ ವಿಡಿಯೋ ನೋಡಿದವರೆಲ್ಲ ಆಕೆ ಭವಿಷ್ಯದಲ್ಲಿ ದೊಡ್ಡ ಸ್ಟಾರ್‌ ಆಗುವುದು ಖಚಿತ ಎನ್ನುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read