ತೆಲಂಗಾಣದಲ್ಲಿ ಹೀಗಿರುತ್ತೆ ʼಯುಗಾದಿʼ ಸಂಭ್ರಮ

ನಾಳೆ ಅಂದ್ರೆ ಮಾರ್ಚ್ 22 ರ ಬುಧವಾರ ಯುಗಾದಿ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ತೆಲಂಗಾಣದಲ್ಲಿ ಯುಗಾದಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ತಯಾರಿ ನಡೆಯುತ್ತಿದೆ. ಕರ್ನಾಟಕದಂತೆ ತೆಲಂಗಾಣ ಹಾಗೂ ಆಂಧ್ರದಲ್ಲಿ ಯುಗಾದಿ ಒಂದು ಅತ್ಯಂತ ಪವಿತ್ರ ಹಾಗೂ ಪ್ರಮುಖ ಹಬ್ಬ.

ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸುವ ಜೊತೆಗೆ ಮನೆ ಬಾಗಿಲಿಗೆ ಮಾವಿನ ತೋರಣವನ್ನು ಕಟ್ಟಲಾಗುತ್ತದೆ. ಪಚ್ಚಡಿಯನ್ನು ಮಾಡಿ ನೀಡಲಾಗುತ್ತದೆ. ಹುಣಿಸೇಹಣ್ಣು, ಮಾವಿನಕಾಯಿ, ತೆಂಗಿನಕಾಯಿ, ಬೇವಿನ ಎಲೆ, ಬೆಲ್ಲವನ್ನು ಹಾಕಿ ಪಚ್ಚಡಿ ಮಾಡಲಾಗುತ್ತದೆ.

ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದವರು ತಮ್ಮ ಕಚೇರಿಯಲ್ಲಿ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ. ತೆಲಂಗಾಣದ ಕೆಲ ಪ್ರದೇಶಗಳ ಜನರು ತಮ್ಮ ಕುಟುಂಬದವರಿಗೊಂದೇ ಅಲ್ಲ ತೋಟದಲ್ಲಿ ಕೆಲಸ ಮಾಡುವ ಜನರಿಗೂ ಬಟ್ಟೆ ಕೊಡಿಸುತ್ತಾರೆ. ಜಾನುವಾರುಗಳಿಗೆ ಸ್ನಾನ ಮಾಡಿಸುವ ಪದ್ಧತಿಯೂ ಇದೆ. ತೆಲಂಗಾಣ ಪ್ರದೇಶದಲ್ಲಿ ಯುಗಾದಿಯನ್ನು ಮೂರು ದಿನ ಆಚರಿಸ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read