ತಿಂಗಳಿಗೆ 30 ಸಾವಿರ ಸಂಬಳ ಪಡೆಯುತ್ತಿದ್ದ ಮಹಿಳಾ ಅಧಿಕಾರಿ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ…!

ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಕೋಟಿಗಟ್ಟಲೆ ಹಣ, ಜಮೀನು, ಮನೆ, ನಿವೇಶನಗಳು ಪತ್ತೆಯಾಗುತ್ತಿದ್ದುದನ್ನು ಈವರೆಗೂ ಕೇಳಿದ್ದೆವು. ಇದೀಗ ಮಧ್ಯಪ್ರದೇಶದ ಮಹಿಳಾ ಅಧಿಕಾರಿ ಮನೆ ಮೇಲೆ ದಾಳಿ ಮಾಡಿದ ಲೋಕಾಯುಕ್ತದವರು ದಂಗಾಗಿದ್ದಾರೆ.

ಕೇವಲ ಹತ್ತು ವರ್ಷಗಳ ಹಿಂದಷ್ಟೇ ಮಧ್ಯಪ್ರದೇಶ ಪೊಲೀಸ್ ವಸತಿ ನಿಗಮ ಮಂಡಳಿಯ ಉಸ್ತುವಾರಿ ಸಹಾಯಕ ಇಂಜಿನಿಯರ್ ಆಗಿ ನೇಮಕಗೊಂಡಿದ್ದ ಹೇಮಾ ಮೀನಾ ಅವರು ತಿಂಗಳಿಗೆ ಪಡೆಯುತ್ತಿದ್ದ ಸಂಬಳ 30 ಸಾವಿರ ರೂಪಾಯಿ. ಆದರೆ ಅವರ ಮನೆ ಮೇಲೆ ದಾಳಿ ನಡೆಸಿದ ವೇಳೆ ಏಳು ಕೋಟಿ ರೂಪಾಯಿ ಸಂಪಾದಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಐದಾರು ಐಷಾರಾಮಿ ಕಾರುಗಳು ಸೇರಿದಂತೆ ಒಟ್ಟು 20 ವಾಹನಗಳು, 20,000 ಚದರಡಿಗಳಷ್ಟು ಭೂಮಿ, 12ಕ್ಕೂ ಅಧಿಕ ಗಿರ್ ತಳಿಯ ಹಸುಗಳು, ವಿದೇಶಿ ತಳಿ ಸೇರಿದಂತೆ ನೂರಕ್ಕೂ ಹೆಚ್ಚು ಶ್ವಾನಗಳು, 98 ಇಂಚಿನ ದೊಡ್ಡ ಟಿವಿ ಮೊದಲಾದವು ಪತ್ತೆಯಾಗಿದ್ದು, ಇನ್ನೂ ಕೂಡ ಆಕೆಯ ಆಸ್ತಿಯ ಮಾಹಿತಿ ಕಲೆ ಹಾಕಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read