ತಾಮ್ರದ ಉಂಗುರ ಧರಿಸಿದ್ರೆ ನಿವಾರಣೆಯಾಗುತ್ತೆ ಈ ಗ್ರಹ ದೋಷ

ಜಾತಕದಲ್ಲಿ ನ್ಯೂನ್ಯತೆಯಿದ್ರೆ ಸಮಸ್ಯೆ ಸಾಮಾನ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿಯೇ ಜಾತಕದಲ್ಲಿರುವ ದೋಷ ನಿವಾರಣೆಗೆ ಪ್ರತಿಯೊಬ್ಬರು ಪ್ರಯತ್ನ ಪಡ್ತಾರೆ. ಪ್ರತಿಯೊಂದು ಗ್ರಹದ ದೋಷ ನಿವಾರಣೆಗೆ ಬೇರೆ ಬೇರೆ ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಬೇರೆ ಬೇರೆ ಲೋಹಗಳು ಬೇರೆ ಬೇರೆ ಗ್ರಹ ದೋಷವನ್ನು ನಿವಾರಿಸುತ್ತದೆ.

ಹಿಂದಿನ ಕಾಲದಲ್ಲಿ ರಾಜ-ಮಹಾರಾಜರು ಎಷ್ಟು ಶ್ರೀಮಂತರಾಗಿದ್ದರೂ ಕಬ್ಬಿಣ ಮತ್ತು ತಾಮ್ರದ ಪಾತ್ರೆಯಲ್ಲಿ ಆಹಾರ ತಯಾರಿಸುತ್ತಿದ್ದರು. ನಂತ್ರ ಬೆಳ್ಳಿ, ಬಂಗಾರದ ಪಾತ್ರೆಯಲ್ಲಿ ಆಹಾರ ಸೇವಿಸುತ್ತಿದ್ದರು. ಕೈ ಬೆರಳಿಗೆ ಜನರು ಅನೇಕ ಲೋಹದ ಉಂಗುರಗಳನ್ನು ಧರಿಸುತ್ತಾರೆ. ತಾಮ್ರದ ಉಂಗುರ ಧರಿಸುವುದ್ರಿಂದ ಸಾಕಷ್ಟು ಲಾಭವಿದೆ.

ತಾಮ್ರದ ಉಂಗುರವನ್ನು ಯಾವಾಗ್ಲೂ ಉಂಗುರ ಬೆರಳಿಗೆ ಧರಿಸಬೇಕು. ಹೀಗೆ ಮಾಡಿದ್ರೆ ಸೂರ್ಯ ಗ್ರಹದ ದೋಷ ಕಡಿಮೆಯಾಗುತ್ತದೆ.

ಸೂರ್ಯ ಗ್ರಹ ದೋಷದ ಜೊತೆ ತಾಮ್ರದ ಉಂಗುರ ಮಂಗಳ ಗ್ರಹ ದೋಷವನ್ನು ಕಡಿಮೆ ಮಾಡುತ್ತದೆ. ತಾಮ್ರದ ಉಂಗುರ ಧರಿಸುವ ಮುನ್ನ ಇದನ್ನು ನೆನಪಿಟ್ಟುಕೊಳ್ಳಿ.

ಉಂಗುರ ನಮ್ಮ ದೇಹದೊಂದಿಗೆ ಸಂಪರ್ಕ ಹೊಂದಿರುತ್ತದೆ. ತಾಮ್ರದ ಔಷಧಿ ಗುಣ ದೇಹ ಸೇರುವುದ್ರಿಂದ ರಕ್ತ ಶುದ್ಧಿಯಾಗುತ್ತದೆ.

ತಾಮ್ರದ ಉಂಗುರ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯನ್ನು ದೂರ ಮಾಡುತ್ತದೆ. ಹಾಗಾಗಿ ಅದನ್ನು ಧರಿಸಬೇಕು ಎನ್ನಲಾಗುತ್ತದೆ.

ತಾಮ್ರ ನಮ್ಮ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read