ಡೆಂಗ್ಯೂ ಪ್ರಕರಣ ಹೆಚ್ಚಳ: ಪ್ಲೆಟ್ ಲೆಟ್, ರಕ್ತದ ಅಗತ್ಯವಿರುವವರು ತುರ್ತಾಗಿ ಏನು ಮಾಡಬೇಕು ? ಇಲ್ಲಿದೆ ಉಪಯುಕ್ತ ಮಾಹಿತಿ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದೆ. ಡೆಂಗ್ಯೂ ಸೋಂಕಿತರಲ್ಲಿ ಕೆಂಪು ರಕ್ತಕಣ ಅಥವಾ ಪ್ಲೇಟ್ ಲೆಟ್ ಕಡಿಮೆಯಾಗುವುದು ಸಹಜ. ಡೆಂಗ್ಯೂ ರೋಗಿಗಳಿಗೆ ರಕ್ತ ಅಥವಾ ಪ್ಲೇಟ್ ಲೆಟ್ ತುರ್ತು ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು? ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆ, ರೆಡ್ ಕ್ರಾಸ್ ಕರ್ನಾಟಕ, ಎರಕ್ತಕೋಶ್, ಸಂಕಲ್ಪ್ ಇಂಡಿಯಾ ಫೌಂಡೇಶನ್, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಸಂಪರ್ಕಿಸಬಹುದು.

ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆ ರಾಜ್ಯಾದ್ಯಂತ ಇರುವ ರಕ್ತನಿಧಿಗಳಲ್ಲಿ ಲಭ್ಯವಿರುವ ವಿವಿಧ ಪ್ರಕಾರಗಳ ರಕ್ತದ ವಿವಿರಗಳನ್ನು, ಸ್ಥಳ, ಸಂಪರ್ಕಿಸಬೇಕಾದವರ ಮಾಹಿತಿಯನ್ನು ನೀಡುತ್ತದೆ.

ರೆಡ್ ಕ್ರಾಸ್ ಕರ್ನಾಟಕ ರಕ್ತದಾನ ಮಾಡುವವರಿಗೆ ಹಾಗೂ ರಕ್ತದ ಅಗತ್ಯವಿರುವವರಿಗೆ ರಕ್ತವನ್ನು ಒದಗಿಸುತ್ತದೆ. ರೆಡ್ ಕ್ರಾಸ್ ಕರ್ನಾಟಕ ವೆಬ್ ಸೈಟ್ ಗೂ ಭೇಟಿ ನೀಡಿ ರಕ್ತ ಅಥವಾ ಪ್ಲೇಟ್ ಲೆಟ್ ಅಗತ್ಯವಿದ್ದರೂ ಅರ್ಜಿ ಭರ್ತಿ ಮಾಡಿ ಆಯ್ಕೆಯನ್ನು ಕ್ಲಿಕ್ ಮಾಡಬಹುದು.

ಎರಕ್ತಕೋಶ್ ಇದು ಸರ್ಕಾರದ ಮೇಲ್ವಿಚಾರಣೆಅಲ್ಲಿ ನಡೆಯುವ ಬ್ಲಡ್ ಬ್ಯಾಂಕ್ ನಿರ್ವಹಣಾ ವ್ಯವಸ್ಥೆ. ಹತ್ತಿರದ ಬ್ಲಡ್ ಬ್ಯಾಂಕ್ ಗಳ ವಿವರಗಳನ್ನು ಒದಗಿಸುತ್ತದೆ. ರಕ್ತ ಅಥವಾ ಪ್ಲೇಟ್ ಲೆಟ್ ಅಗತ್ಯವಿರುವವರು ಆಯಾ ಜಿಲ್ಲೆ, ರಾಜ್ಯ ಆಯ್ಕೆ ಮಾಡಿಕೊಂಡು ನಂತರ ರಕ್ತ ಬ್ಯಾಂಕ್ ವಿಳಾಸ ಪರಿಶೀಲಿಸಬಹುದು

ಸಂಕಲ್ಪ್ ಇಂಡಿಯಾ ಸಂಸ್ಥೆಯು ರಕ್ತಕ್ರಾಂತಿ ಯೋಜನೆಯಡಿ ರಕ್ತನಿಧಿ ಮೇಲ್ವಿಚಾರಣೆ ಮಾಡುತ್ತದೆ. ರಕ್ತದಾನ ಶಿಬಿರಗಳನ್ನು ಸ್ವಯಂ ಪ್ರೇರಿತವಾಗಿ ಆಯೋಜಿಸುತ್ತದೆ. ಇನ್ನು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಸರ್ಕಾರದ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಇದರ ವೆಬ್ ಸೈಟ್ ಗೆ ಭೇಟಿ ನೀಡಿ ರಕ್ತ ದಾನ ಅಥವಾ ಅಗತ್ಯಕ್ಕಾಗಿ ಮನವಿ ಸಲ್ಲಿಸಬಹುದು.

ಇಷ್ಟೇ ಅಲ್ಲ BloodAid, BloodDonarsindia, iCanSaveLife ಇವು ಕೂಡ ತುರ್ತು ಸಂದರ್ಭದಲ್ಲಿ ರಕ್ತದಾನ ಅಥವಾ ರಕ್ತದ ಅಗತ್ಯವಿರುವವರಿಗೆ ಸಹಾಯ ಮಾಡುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read