ಬೆಂಗಳೂರು : ‘ವೀಕೆಂಡ್ ವಿತ್ ರಮೇಶ್’ (Weekend with Ramesh’)
ಸೀಸನ್ 5 ರ 100 ನೇ ಅತಿಥಿಯಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಎಂಟ್ರಿ ಕೊಟ್ಟಿದ್ದು, ಈಗಾಗಲೇ ಬಿಡುಗಡೆ ಆದ ಪ್ರೋಮೋ ಗಮನ ಸೆಳೆಯುತ್ತಿದೆ.
ಈಗಾಗಲೇ ಬಿಡುಗಡೆಯಾದ ಎರಡು ಪ್ರೋಮೋ (Promo) ಹಲವು ಕುತೂಹಲಕ್ಕೆ ಕಾರಣವಾಗಿದ್ದು, ಡಿ.ಕೆ. ಶಿವಕುಮಾರ್ ಜೀವನ ಚರಿತ್ರೆ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಬಿಡುಗಡೆ ಆಗಿರುವ ಪ್ರೋಮೋ ಒಂದರಲ್ಲಿ ಡಿ ಕೆ ಶಿವಕುಮಾರ್ ತಮ್ಮನ ಮೇಲೆ ಪ್ರೀತಿ ವ್ಯಕ್ತಪಡಿಸಿದ್ದಾರೆ. ಅವನು ನನ್ನ ತಮ್ಮನಲ್ಲ ನನಗೆ ಮಗ ಇದ್ದಂತೆ ಎಂದು ತಮ್ಮನ ಬಗ್ಗೆ ಡಿಕೆ ಶಿವಕುಮಾರ್ (DK Sivakumar) ಹಾಡಿ ಹೊಗಳಿದ್ದಾರೆ. ಈ ವಾರವೇ ಡಿ ಕೆ ಶಿವಕುಮಾರ್ ಸಂಚಿಕೆ ಪ್ರಸಾರವಾಗುತ್ತಿದೆ. ವೀಕೆಂಡ್ ವಿತ್ ನಲ್ಲಿ ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಪಟ್ಟಕ್ಕೇರಿದ್ದು, ವೀಕೆಂಡ್ ವಿತ್ ರಮೇಶ್’ ಸೀಸನ್ 5 ರ 100 ನೇ ಅತಿಥಿಯಾಗಿ (guest) ಡಿಸಿಎಂ ಡಿ.ಕೆ. ಶಿವಕುಮಾರ್ ಆಗಮಿಸಿದ್ದಾರೆ.