ಬೆಂಗಳೂರು: ಸೈಬರ್ ವಂಚಕರು ವಾಹನ ಸವಾರರ ಮೊಬೈಲ್ ನಂಬರಗಳಿಗೂ ಲಿಂಕ್ ಕಳಿಹಿಸುವ ಮೂಲಕ ಕನ್ನಹಾಕುವ ಕೆಲಸ ಮಾಡುತ್ತಿದ್ದಾರೆ. ಟ್ರಾಫಿಕ್ ಫೈನ್ ಕಟ್ಟಲು ಹೋದ ಟೆಕ್ಕಿಯೊಬ್ಬ ಸೈಬರ್ ವಂಚಕರು ಕಳುಹಿಸಿದ ಲಿಂಕ್ ಕ್ಲಿಕ್ಕಿಸಿ 2.65 ಲಕ್ಷ ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಚಾರಿ ಪೊಲೀಸರು 50% ರಿಯಾಯಿತಿ ನೀಡಿ ದಂಡ ಕಟ್ಟಲು ಅವಕಾಶ ನೀಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ವಾಹನ ಸವಾರರ ಮೊಬೈಲ್ ಸಂಖ್ಯೆಗೆ ಕೆಲ ಲಿಂಕ್ ಗಳನ್ನು ಕಳುಹಿಸುತ್ತಿದ್ದಾರೆ. ಎಪಿಕೆ ಫೈಲ್ ಕಳುಹಿಸಿ ವಾಹನಗಳ ಡಂದವನ್ನು ಚೆಕ್ ಮಾಡಿಕೊಳ್ಳಿ. ಅದರಲ್ಲಿಯೇ ದಂಡ ಪಾವತಿಸಬಹುದು ಎಂದು ಸಂದೇಶ ರವಾನಿಸುತ್ತಿದ್ದಾರೆ. ಲಿಂಕ್ ಓಪನ್ ಮಾಡುತ್ತಿದಂತೆಯೇ ಅಕೌಂಟ್ ನಿಂದ ಹಣ ಡ್ರಾ ಆಗಿ ಹಣ ಕಳೆದುಕೊಳ್ಳುತ್ತಿದ್ದಾರೆ.
ಕೋಡಿಗೆಹಳ್ಳಿ ವ್ಯಾಪ್ತಿಯ ಟೆಕ್ಕಿಯೊಬ್ಬರು ಸೈಬರ್ ವಂಚಕರು ಕಳುಹಿಸಿದ ಈ ರೀತಿ ಲಿ ಕ್ ಓಪನ್ ಮಾಡಿ ಕೆಲವೇ ನಿಮಿಷಗಳಲ್ಲಿ 2.65 ಲಕ್ಷ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಕೋಡಿಗೆಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.