ಜೋಧ್ಪುರ ರಾಜಸ್ಥಾನದ ಮೋಡಿ ಮಾಡುವ ನಗರ; ಇದನ್ನು ʼಬ್ಲೂ ಸಿಟಿʼ ಎಂದು ಕರೆಯಲು ಕಾರಣವೇನು….?

ಬ್ಲೂ ಸಿಟಿ, ಸನ್ ಸಿಟಿ, ಗೇಟ್ ವೇ ಟು ಥಾರ್ ಎಂದು ಹೆಸರಿರುವ ಜೋಧ್ಪುರ ಮೆಹ್ರಾನ್ ಘರ್, ನೀಲಿ ಮನೆಗಳು, ದೇವಾಲಯಗಳು, ಸಿಹಿ ತಿಂಡಿಗಳಿಗೆ ಹೆಸರುವಾಸಿ.

ಜೋಧ್ಪುರ ರಾಜಸ್ಥಾನದ ಮೋಡಿ ಮಾಡುವ ನಗರಗಳಲ್ಲಿ ಒಂದು. ಈ ನಗರದಲ್ಲಿರುವ ಬಹುತೇಕ ಎಲ್ಲಾ ಮನೆಗಳ ಗೋಡೆಗಳು ನೀಲಿ ಬಣ್ಣದಲ್ಲಿರುವುದರಿಂದ ನಗರಕ್ಕೆ ಬ್ಲೂ ಸಿಟಿ ಎಂಬ ಹೆಸರು ಬಂದಿದೆ.

ದಿ ಡಾರ್ಕ್ ನೈಟ್ ರೈಸಸ್ ಚಿತ್ರದಲ್ಲಿ ಜೋಧಪುರ ಅದೆಷ್ಟು ಸೊಗಸಾಗಿ ಕಾಣಿಸಿಕೊಂಡಿದೆ ಎಂದರೆ ವಿಶ್ವಾದ್ಯಂತ ಪ್ರವಾಸಿಗರನ್ನು ಆಕರ್ಷಿಸಿದೆ. ರಾಜಸ್ಥಾನದ ಮಧ್ಯ ಭಾಗದಲ್ಲಿರುವ ಈ ತಾಣ ಪ್ರವಾಸಿಗರ ಪ್ರಿಯವಾದ ತಾಣವೂ ಹೌದು.

ರಾಜಸ್ಥಾನದ ಎರಡನೆಯ ಅತಿ ದೊಡ್ಡ ನಗರವಾದ ಜೋಧ್ಪುರದಲ್ಲಿರುವ ಥಾರ್ ಮರುಭೂಮಿಯ ಸೌಂದರ್ಯವೂ ಹಲವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read