ಜೀವನ ಸುಂದರ ಆದ್ರೆ ಇದನ್ನು ಅನುಸರಿಸಲು ಮರೆಯಬೇಡಿ

ಜೀವನ ಎಂಬುದು ಸುಂದರವಾದ ಉಡುಗೊರೆ. ಅದನ್ನು ಅನ್ಯ ಕಾರಣಕ್ಕೆ ವ್ಯರ್ಥ ಮಾಡಿಕೊಳ್ಳುವವರೇ ಜಾಸ್ತಿ. ವ್ಯರ್ಥಾಲಾಪದಲ್ಲಿ ಬದುಕನ್ನು ಹಾಳು ಮಾಡಿಕೊಳ್ಳದೇ ಒಮ್ಮೆ ಯೋಚಿಸಿ.

ನಿಮಗೆ ಇಷ್ಟವಾದಂತೆ ನಿಮ್ಮ ಜೀವನವನ್ನು ರೂಪಿಸಿಕೊಳ್ಳಲು ನಿಮ್ಮಲ್ಲಿಯೇ ಅವಕಾಶಗಳಿವೆ. ಅವುಗಳನ್ನು ಅನುಸರಿಸಲು ಮುಂದಾಗಿ.

ಇನ್ನೊಬ್ಬರೊಂದಿಗೆ ವಿನಾಕಾರಣ ವಾಗ್ವಾದಕ್ಕೆ ಇಳಿಯಬೇಡಿ. ಕೆಲವರಿಗೆ ಮಾತನಾಡಲು ಬರುವುದೇ ಇಲ್ಲ ಎಂಬುದನ್ನು ತಿಳಿಯಿರಿ.

ಊಟ, ತಿಂಡಿ ಸರಿ ಇಲ್ಲ ಎಂದು ದೂರುವುದನ್ನು ಬಿಡಿ. ಇರುವುದನ್ನೇ ತಿನ್ನಲು ಮುಂದಾಗಿ. ಅನೇಕರಿಗೆ ಒಂದು ಹೊತ್ತಿನ ಊಟವೂ ಸಿಗುತ್ತಿಲ್ಲ ಎಂಬುದು ನಿಮಗೆ ನೆನಪಿರಲಿ.

ಮಕ್ಕಳ ಬಗ್ಗೆ ಕೋಪ ಮಾಡಿಕೊಳ್ಳಬೇಡಿ. ಅವರೊಂದಿಗೆ ಕೆಲ ಸಮಯವನ್ನು ಕಳೆಯಿರಿ. ಇನ್ನು ನೀವು ಮಾಡುವ ಕೆಲಸದ ಬಗ್ಗೆ ಎಂದಿಗೂ ತಾತ್ಸಾರ ಮಾಡಬೇಡಿ. ಅನೇಕರಿಗೆ ಕೆಲಸವೇ ಸಿಗುವುದಿಲ್ಲ. ನಿಮಗೆ ಸಿಕ್ಕ ಕೆಲಸವನ್ನು ತೃಪ್ತಿಯಿಂದ ಮಾಡಿರಿ ಎನ್ನುವುದು ಅನುಭವಿಗಳ ಮಾತಾಗಿದೆ.

ಕಷ್ಟವಾಯಿತೆಂದು ಬೇಸರಪಟ್ಟುಕೊಳ್ಳಬೇಡಿ. ಕಷ್ಟವನ್ನು ಧೈರ್ಯವಾಗಿ ಎದುರಿಸಿ. ಜೀವನವನ್ನು ಶಪಿಸದೇ ಎಲ್ಲವನ್ನು ಸಮರ್ಥವಾಗಿ ನಿಭಾಯಿಸುವುದನ್ನು ಕಲಿಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read