ಜಸ್ಟ್ ಎಸ್ಕೇಪ್…ಬಿರುಗಾಳಿ ಮಳೆ ನಡುವೆ ಧರೆಗಪ್ಪಳಿಸಿದ ಸಿಡಿಲು… ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

ಹೈದರಾಬಾದ್: ಧಾರಾಕಾರ ಮಳೆ, ಬಿರುಗಾಳಿ ನಡುವೆ ಮನೆ ಬಳಿಯೇ ಸಿಡಿಲು ಅಪ್ಪಳಿಸಿದ್ದು, ವ್ಯಕ್ತಿಯೋರ್ವ ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಹೈದರಾಬಾದ್ ನ ಅತ್ತಾಪುರದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೋರ್ವ ಮಿಂಚು, ಸಿಡಿಲಿನ ಅಬರಕ್ಕೆ ತಪ್ಪಿಸಿಕೊಳ್ಳಲು ಮನೆಯೊಳಕ್ಕೆ ಓಡಿದ್ದಾನೆ. ಕ್ಷಣಾರ್ಧದಲ್ಲಿ ಭಯಂಕರ ಶಬ್ಧದೊಂದಿಗೆ ಬೀದಿಯಲ್ಲಿ ಸಿಡಿಲು ಅಪ್ಪಳಿಸಿದೆ. ಕೂದಲೆಳೆ ಅಂತರದಲ್ಲಿ ವ್ಯಕ್ತಿ ಬಚಾವ್ ಆದ ಈ ದೃಶ್ಯ ಮೈನಡುಗಿಸುವಂತಿದೆ.

ಹೈದರಾಬಾದ್ ನಲ್ಲಿ ಭಾರೀ ಮಳೆಯಾಗಿದ್ದು, ವೈರ ಆಗಿರುವ ವಿಡಿಯೋದಲ್ಲಿರುವ ವ್ಯಕ್ತಿ ರಸ್ತೆಯಲ್ಲಿ ಸಿಡಿಲು ಬಡಿದಾಗ ಪವಾಡ ರೀತಿಯಲ್ಲಿ ಪಾರಾಗಿ ಬದುಕಿದ್ದಾನೆ. ಸಿಡಿಲ ಅಬ್ಬರಕ್ಕೆ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳು, ಉಪಕಣಗಳು ಹಾನಿಯಾಗಿವೆ. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಹೈದರಾಬಾದ್‌ನಲ್ಲಿ ಈ ತಿಂಗಳ ಅಂತ್ಯದವರೆಗೆ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಸಿಕಂದರಾಬಾದ್, ಚಾರ್ಮಿನಾರ್, ಎಲ್‌ಬಿ ನಗರ, ಸೆರಿಲಿಂಗಂಪಲ್ಲಿ ಮತ್ತು ಖೈರ್ತಾಬಾದ್‌ನಂತಹ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read