ಚುನಾವಣಾ ಫಲಿತಾಂಶದ ‘ನಿಖರ’ ಭವಿಷ್ಯ ನುಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ….!

ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣಾ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬಹಿರಂಗ ಪ್ರಚಾರಕ್ಕೆ ಇಂದು ಸಂಜೆಯಿಂದ ತೆರೆ ಬೀಳಲಿದೆ. ಬಳಿಕ ಅಭ್ಯರ್ಥಿಗಳು ಮನೆಮನೆಗೆ ತೆರಳಿ ಪ್ರಚಾರ ನಡೆಸಬೇಕಾಗಿದ್ದು, ಇದರ ಜೊತೆಗೆ ಹೊರಗಿನವರು ಕ್ಷೇತ್ರ ಬಿಟ್ಟು ತೆರಳಬೇಕಿದೆ.

ಮತದಾನಕ್ಕೂ ಮುನ್ನವೇ ಈ ಬಾರಿ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಸಮೀಕ್ಷೆಗಳು ನಡೆದಿದ್ದು, ಇದರ ಜೊತೆಗೆ ಕೆಲವರು ತಮ್ಮ ನೆಚ್ಚಿನ ಅಭ್ಯರ್ಥಿಯ ಪರವಾಗಿ ಬೆಟ್ಟಿಂಗ್ ಆರಂಭಿಸಿದ್ದಾರೆ. ಈ ಎಲ್ಲದರ ನಡುವೆ ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷ ಮಂಗಳೂರಿನ ಡಾ. ನರೇಂದ್ರ ನಾಯಕ್ ಜ್ಯೋತಿಷಿಗಳಿಗಾಗಿ ಬಂಪರ್ ಘೋಷಣೆಯೊಂದನ್ನು ಮಾಡಿದ್ದಾರೆ.

ಕರ್ನಾಟಕದಲ್ಲಿ ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ? ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಷ್ಟು ಸೀಟು ಗೆಲ್ಲುತ್ತದೆ ? ಆಯ್ಕೆಯಾಗುವ ಮಹಿಳಾ ಶಾಸಕರೆಷ್ಟು ? ಪಕ್ಷೇತರರು ಗೆಲ್ಲುವ ಸ್ಥಾನವೆಷ್ಟು ?……. ಹೀಗೆ 20 ಪ್ರಶ್ನೆಗಳಿಗೆ ನಿಖರ ಉತ್ತರ ನೀಡುವ ಜ್ಯೋತಿಷಿಗಳಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ನರೇಂದ್ರ ನಾಯಕ್ ಹೇಳಿದ್ದಾರೆ.

1976 ರಲ್ಲಿ ದಕ್ಷಿಣ ಕನ್ನಡದಲ್ಲಿ ವಿಚಾರವಾದಿ ಸಂಘ ಸ್ಥಾಪಿಸಿದ್ದ ಡಾ. ನರೇಂದ್ರ ನಾಯಕ್ ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವ ಉತ್ತೇಜಿಸುತ್ತಿದ್ದು, 2009 ರಿಂದ ಈ ಸವಾಲನ್ನು ಆರಂಭಿಸಿದ್ದಾರೆ. ಜ್ಯೋತಿಷಿಗಳಿಂದ ಜನರು ವಂಚನೆಗೆ ಒಳಗಾಗಬಾರದು ಎಂದು ಹೇಳುವ ನರೇಂದ್ರ ನಾಯಕ್, ಜ್ಯೋತಿಷ್ಯವು ವಿಜ್ಞಾನವೆಂದು ಸಾಬೀತು ಮಾಡಿದರೆ ಅದನ್ನು ನಾನು ಒಪ್ಪಲು ತಯಾರಿದ್ದೇನೆ ಎನ್ನುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read