ಬೆಂಗಳೂರು : ರಾಜ್ಯದಲ್ಲಿ ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನಕ್ಕೆ ಪತರುಗುಟ್ಟುತ್ತಿರುವ ಸಿದ್ದರಾಮಯ್ಯ ಸರ್ಕಾರ ಸಿಕ್ಕ ಸಿಕ್ಕ ಇಲಾಖೆಗೆ ‘ಕೈ’ ಹಾಕಿ ಆರ್ಥಿಕ ದಿವಾಳಿ ಎಬ್ಬಿಸುತ್ತಿದೆ ಎಂದು ಬಿಜೆಪಿ (BJP) ಟ್ವೀಟ್ ಮಾಡಿ ವಾಗ್ಧಾಳಿ ನಡೆಸಿದೆ.
ಬಿಎಂಟಿಸಿ- ಆರ್ಥಿಕ ಇಂಧನವಿಲ್ಲ, ಜಲಮಂಡಳಿ- ಹಣಕಾಸಿನ ಹಾಹಾಕಾರ, ಕೆಎಸ್ಆರ್ಟಿಸಿ – ನಷ್ಟದ ಹೆದ್ದಾರಿಯಲ್ಲಿ, ವಿದ್ಯುತ್ ಸರಬರಾಜು ಕಂಪೆನಿಗಳು – ಮುಳುಗುವ ಹಾದಿಯಲ್ಲಿ ಇನ್ನು ಹಲವು ಇಲಾಖೆಗಳ ಸಂಸ್ಥೆಗಳು ಅಧಃಪತನದ ಪಟ್ಟಿಯಲ್ಲಿದ್ದು, ‘ಅರ್ಥ’ವಿಲ್ಲದ ಎಟಿಎಂ ಸರ್ಕಾರ (ATM Govt) ಸೃಷ್ಟಿಸಿರುವ ಅರಾಜಕತೆಗೆ ಬಲಿಯಾಗಲು ‘ಸಿದ್ದ’ವಾಗಿವೆ ಎಂದು ಟ್ವೀಟ್ ಮಾಡಿದೆ.
ರಾಜ್ಯದ ಪ್ರತೀ ಮನೆಗೂ ದಿಢೀರ್ ವಿದ್ಯುತ್ ಬಿಲ್ ಫಿಕ್ಸೆಡ್ ದರ ಹೆಚ್ಚಿಸಿದ ಸರ್ಕಾರ ಜೇಬು ತುಂಬಿಸಿಕೊಳ್ಳಲು ಜನರಿಂದ ಲೂಟಿ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ನೀಡುವ ಮುನ್ನವೇ ಜನರಿಂದ ವಸೂಲಿಗೆ ಇಳಿದಿರುವುದು ಜನತೆ ಇಟ್ಟಿದ್ದ ನಂಬಿಕೆಗೆ ಮಾಡುತ್ತಿರುವ ಮಹಾ ದ್ರೋಹ..! ಕಾಂಗ್ರೆಸ್ಸಿಗರ ಎಲುಬಿಲ್ಲದ ನಾಲಿಗೆಗೆ ನಾಡಿನ ಜನತೆ ತಕ್ಕ ಪಾಠ ಕಲಿಸುವುದು ಖಚಿತ ಎಂದು ಬಿಜೆಪಿ ಟ್ವೀಟ್ ಮಾಡಿ ವಾಗ್ಧಾಳಿ ನಡೆಸಿದೆ.
https://twitter.com/BJP4Karnataka/status/1666341750011731969?ref_src=twsrc%5Egoogle%7Ctwcamp%5Eserp%7Ctwgr%5Etweet