ಗೊರಕೆಯನ್ನು ನಿರ್ಲಕ್ಷಿಸಬೇಡಿ, ಇದು ಹೃದಯಾಘಾತಕ್ಕೂ ಕಾರಣವಾಗಬಹುದು…..!

ನಿದ್ದೆಯಲ್ಲಿ ಗೊರಕೆ ಹೊಡೆಯುವುದು ಸಾಮಾನ್ಯ. ಈ ಸಮಸ್ಯೆ ಬಹುತೇಕ ಜನರಲ್ಲಿ ಕಂಡುಬರುತ್ತದೆ. ಆದರೆ ಗೊರಕೆಯ ತೊಂದರೆಯನ್ನು ಲಘುವಾಗಿ ಪರಿಗಣಿಸಬಾರದು, ಏಕೆಂದರೆ ಗೊರಕೆಯು ಅನೇಕ ಗಂಭೀರ ಸಮಸ್ಯೆಗಳಿಗೆ ಕಾರಣ ಮತ್ತು ಸಂಕೇತವೂ ಆಗಿರಬಹುದು. ಗೊರಕೆಯಿಂದ ನಮ್ಮ ಸುತ್ತ ಮುತ್ತ ಮಲಗುವವರಿಗೆ ತೊಂದರೆಯಾಗುತ್ತದೆ. ಗೊರಕೆಯಿಂದ ಬರುವ ರೋಗಗಳು ಮತ್ತು ಅದರಿಂದ ಮುಕ್ತಿ ಪಡೆಯುವ ವಿಧಾನಗಳನ್ನು ತಿಳಿಯೋಣ.

ಗೊರಕೆಯನ್ನು ಹೋಗಲಾಡಿಸುವುದು ಹೇಗೆ?

ಜೀವನಶೈಲಿಯಲ್ಲಿ ಬದಲಾವಣೆ

ತೂಕ ಇಳಿಕೆ

ಮಲಗುವ ಮುನ್ನ ಮದ್ಯಪಾನ ಮಾಡಬೇಡಿ

ದಿಂಬಿನ ಮೇಲೆ ತಲೆಯಿಟ್ಟು ಮಲಗಲು ಪ್ರಯತ್ನಿಸಿ

ಗೊರಕೆಯನ್ನು ನಿಲ್ಲಿಸಲು ಶಸ್ತ್ರಚಿಕಿತ್ಸೆ ಸಹ ಸಹಾಯಕ

ಗೊರಕೆಯಿಂದ ಬರುವ 5 ಅಪಾಯಕಾರಿ ಕಾಯಿಲೆಗಳು

ಗೊರಕೆ ಮತ್ತು ಪಾರ್ಶ್ವವಾಯು

ಗೊರಕೆಯಿಂದಾಗಿ ಪಾರ್ಶ್ವವಾಯು ಅಪಾಯವು ಶೇಕಡಾ 46 ರಷ್ಟು ಹೆಚ್ಚಾಗುತ್ತದೆ. ಇದು ಅಪಧಮನಿಯ ಹಾನಿಯ ಸಂಕೇತವೂ ಆಗಿರಬಹುದು. ಅದಕ್ಕಾಗಿಯೇ ವೈದ್ಯರ ಸಲಹೆಯನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು.

ಗೊರಕೆ ಮತ್ತು ಹೃದಯ ಕಾಯಿಲೆ

ಆರೋಗ್ಯ ತಜ್ಞರ ಪ್ರಕಾರ ಸ್ಲೀಪ್ ಅಪ್ನಿಯಾದಿಂದಲೂ ಗೊರಕೆ ಬರುತ್ತದೆ. ಇತರರಿಗಿಂತ ಹೆಚ್ಚು ಗೊರಕೆ ಹೊಡೆಯುವವರಲ್ಲಿ ಹೃದಯಾಘಾತದ ಅಪಾಯ ಹೆಚ್ಚು.

ಗೊರಕೆ ಮತ್ತು ಬೆನಿಗ್ನ್ ಪ್ರೊಸ್ಟಾಟಿಕ್ ಹೈಪರ್ಪ್ಲಾಸಿಯಾ

ಗೊರಕೆಯ ಕಾರಣ ರಾತ್ರಿಯಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಮೂತ್ರ ಮಾಡಲು ಬಾತ್‌ರೂಮಿಗೆ ಹೋಗಬೇಕಾಗಬಹುದು. ಇದನ್ನು ನೋಕ್ಟೂರಿಯಾ ಎಂದು ಕರೆಯಲಾಗುತ್ತದೆ. ಸಂಶೋಧನೆಯ ಪ್ರಕಾರ  55 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಮೂತ್ರ ವಿಸರ್ಜಿಸಲು ಆಗಾಗ  ಎಚ್ಚರಗೊಂಡರೆ  ಅದು ಬೆನಿಗ್ನ್ ಪ್ರೊಸ್ಟಾಟಿಕ್ ಹೈಪರ್ಪ್ಲಾಸಿಯಾ. ಇದರಿಂದ ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಉಂಟಾಗುತ್ತದೆ.

ಗೊರಕೆ ಮತ್ತು ಅಧಿಕ ರಕ್ತದೊತ್ತಡ

ಅತಿಯಾಗಿ ಗೊರಕೆ ಹೊಡೆಯುವ ಜನರು ಅನೇಕ ಉಸಿರಾಟದ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅವರಿಗೆ ಅಧಿಕ ರಕ್ತದೊತ್ತಡದ ಅಪಾಯವೂ ಹೆಚ್ಚು. ಅದಕ್ಕಾಗಿಯೇ ಗೊರಕೆಯ ಸಮಸ್ಯೆ ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಗುತ್ತದೆ.

ಗೊರಕೆ ಮತ್ತು ಮಧುಮೇಹ

ಪ್ರತಿದಿನ ಹೆಚ್ಚು ಗೊರಕೆ ಹೊಡೆಯುವರು ಸಕ್ಕರೆ ಕಾಯಿಲೆಗೆ ತುತ್ತಾಗುವ ಅಪಾಯ ಶೇಕಡಾ 50 ರಷ್ಟು ಹೆಚ್ಚಾಗಿರುತ್ತದೆ. ಸ್ಲೀಪ್ ಅಪ್ನಿಯಾ, ಟೈಪ್ 2 ಮಧುಮೇಹಕ್ಕೆ ಸಂಬಂಧಿಸಿದೆ. ಗೊರಕೆಯು ಮಧುಮೇಹಕ್ಕೆ ಕಾರಣವಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read