‘ಗೃಹಲಕ್ಷ್ಮೀ’ ಯೋಜನೆಯಿಂದ ಮನೆಯಲ್ಲಿ ಜಗಳ ಹಚ್ಚುವ ಕೆಲಸ : M.P ರೇಣುಕಾಚಾರ್ಯ

ದಾವಣಗೆರೆ : ‘ಗೃಹಲಕ್ಷ್ಮೀ’ ಯೋಜನೆ ಮೂಲಕ ಸರ್ಕಾರ ಮನೆಯಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ (MP Renukacharya)ಕಿಡಿಕಾರಿದ್ದಾರೆ.‌

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ಕಾಂಗ್ರೆಸ್ ಹೇಳಿದ್ದೊಂದು ಈಗ ಮಾಡುತ್ತಿರುವುದು ಇನ್ನೊಂದು. ಘೋಷಣೆ ಮಾಡಿದಂತೆ ಸರ್ಕಾರ ನಡೆದುಕೊಳ್ಳುತ್ತಿಲ್ಲ. ಎಲ್ಲಾ ಮನೆ ಯಜಮಾನಿಗೂ 2000 ರೂ. ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಇದೀಗ ಉಲ್ಟಾ ಹೊಡೆಯುತ್ತಿದೆ. ತೆರಿಗೆ (tax) ಕಟ್ಟುವವರಿಗೆ 2000 ಹಣ ಕೊಡಲ್ಲ ಎಂದು ಹೇಳಿದೆ ಎಂದು ಕಿಡಿಕಾರಿದರು.

2000 ರೂ. ಹಣ ನೀಡುವ ಮೂಲಕ ಅತ್ತೆ – ಸೊಸೆಯಲ್ಲಿ ಜಗಳ ತಂದಿಡುತ್ತಿದೆ. ‘ಗೃಹಲಕ್ಷ್ಮೀ’ ಯೋಜನೆ (Gruhakshmi’ scheme) ಜಗಳ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಸರ್ಕಾರ ಅತ್ತೆ ಹಾಗೂ ಸೊಸೆ ಇಬ್ಬರಿಗೂ ಎರಡು ಸಾವಿರ ರೂ. ಹಣ ನೀಡಬೇಕು. ಈ ಹಿಂದೆ ಎಲ್ಲಾ ಮಹಿಳೆಯರಿಗೆ 2,000 ರೂ. ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಇದಕ್ಕೂ ಷರತ್ತುಗಳನ್ನು ವಿಧಿಸಲಾಗಿದೆ ಎಂದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read