ಗಾರ್ಡನ್ ಸಿಟಿ ಎಂಬ ಬೆಂಗಳೂರಿನ ಖ್ಯಾತಿಯನ್ನು ಗಾಂಜಾ ಸಿಟಿ ಎಂಬ ಕುಖ್ಯಾತಿಗೆ ತಳ್ಳಿದ್ದೇ ಬಿಜೆಪಿ: ಕಾಂಗ್ರೆಸ್‌ ಟಾಂಗ್

ರಾಜಕಾಲುವೆಗಳನ್ನು ನುಂಗಿ ಹಾಕಿದವರೇ ಕಾಂಗ್ರೆಸ್ ನವರು. ಬೆಂಗಳೂರನ್ನು ಹಾಳು ಮಾಡಿದವರೇ ಕೈ ನಾಯಕರು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್‌, ಗಾರ್ಡನ್ ಸಿಟಿ ಎಂಬ ಬೆಂಗಳೂರಿನ ಖ್ಯಾತಿಯನ್ನು ಗಾಂಜಾ ಸಿಟಿ ಎಂಬ ಕುಖ್ಯಾತಿಗೆ ತಳ್ಳಿದ್ದೇ ಬಿಜೆಪಿ ಎಂದು ಟಾಂಗ್‌ ನೀಡಿದೆ.

ಈ ಕುರಿತಂತೆ ಕಾಂಗ್ರೆಸ್‌ ತನ್ನ ಅಧಿಕೃತ ಖಾತೆಯಿಂದ ಟ್ವೀಟ್‌ ಮಾಡಿದ್ದು, ಗಾರ್ಡನ್ ಸಿಟಿ ಎಂಬ ಬೆಂಗಳೂರಿನ ಖ್ಯಾತಿಯನ್ನು ಗಾಂಜಾ ಸಿಟಿ ಎಂಬ ಕುಖ್ಯಾತಿಗೆ ತಳ್ಳಿದ್ದೇ ಬಿಜೆಪಿ ಸಾಧನೆ. ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬರುತ್ತಿದ್ದರು, ಇಂದು ಗಾಂಜಾ, ಡ್ರಗ್ಸ್ ವ್ಯಾಪಾರಕ್ಕಾಗಿ ಬರುತ್ತಿದ್ದಾರೆ. ಮೊನ್ನೆಯಷ್ಟೇ ಜಪ್ತಿಯಾದ ಒಂದು ಲೋಡ್ ಗಾಂಜಾವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ವ್ಯಂಗ್ಯವಾಡಿದೆ.

https://twitter.com/INCKarnataka/status/1617390880931057664

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read