ಖ್ಯಾತ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ

ಮಾಜಿ ಅಂತರಾಷ್ಟ್ರೀಯ ಆಟಗಾರ ಸಲೀಂ ದುರಾನಿ ಭಾನುವಾರದಂದು ವಿಧಿವಶರಾಗಿದ್ದಾರೆ. ಗುಜರಾತಿನ ಜಾಮ್ ನಗರದಲ್ಲಿ ನೆಲೆಸಿದ್ದ 88 ವರ್ಷದ ಸಲೀಂ ದುರಾನಿ ಕಳೆದ ಜನವರಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

1960ರ ದಶಕದ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಆಕರ್ಷಕ ಶೈಲಿಯ ಕ್ರಿಕೆಟಿಗ ಎಂದೇ ಹೆಸರಾಗಿದ್ದ ಅವರು, ಬೇಡಿಕೆ ಮೇರೆಗೆ ಸಿಕ್ಸರ್ ಬಾರಿಸುವ ಖ್ಯಾತಿಯನ್ನೂ ಹೊಂದಿದ್ದರು. ಅಲ್ಲದೆ ಬೌಲಿಂಗ್ ನಲ್ಲಿಯೂ ಸಹ ಸಲೀಂ ದುರಾನಿ ತಮ್ಮ ಛಾಪು ಮೂಡಿಸಿದ್ದರು.

ಬಾಲಿವುಡ್ ಚಿತ್ರರಂಗದಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿದ್ದ ಸಲೀಂ ದುರಾನಿ, ಖ್ಯಾತ ನಟಿ ತನುಜಾ ಜೊತೆ ‘ಏಕ್ ಮಾಸೂಮ್’ ಹಾಗೂ ಪರ್ವೀನ್ ಬಾಬಿ ಜೊತೆ ‘ಚರಿತ್ರಾ’ ಸಿನಿಮಾದಲ್ಲಿ ನಟಿಸಿದ್ದರು. ಸಲೀಂ ದುರಾನಿ ನಿಧನಕ್ಕೆ ಕ್ರಿಕೆಟ್ ಹಾಗೂ ಬಾಲಿವುಡ್ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read