ಖಾಸಗಿ ಅಂಗದ ಕಪ್ಪು ಕಲೆ ನಿವಾರಿಸಲು ಇಲ್ಲಿದೆ ಸರಳ ʼಟಿಪ್ಸ್ʼ

ಸೌಂದರ್ಯ ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರೂ ಆಸಕ್ತಿ ಹೊಂದಿರುತ್ತಾರೆ. ಮುಖ, ಕೈ, ಕಾಲಿನ ಅಂದ ಹೆಚ್ಚಿಸಿಕೊಳ್ಳಲು ಬ್ಯೂಟಿಪಾರ್ಲರ್ ಮೊರೆ ಹೋಗ್ತೇವೆ.

ಆದ್ರೆ ಖಾಸಗಿ ಅಂಗದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಸುಲಭವಲ್ಲ.

ಸಾಮಾನ್ಯವಾಗಿ ಖಾಸಗಿ ಅಂಗಗಳನ್ನು ಸ್ವಚ್ಛಗೊಳಿಸಿಕೊಳ್ತೇವೆ ನಿಜ. ಆದ್ರೆ ಖಾಸಗಿ ಅಂಗ ಅನೇಕ ಕಾರಣಕ್ಕೆ ಕಪ್ಪಾಗಿರುತ್ತದೆ. ಹೇರ್ ರಿಮೂವ್ ಕ್ರೀಮ್,‌ ಬಿಗಿ ಬಟ್ಟೆ, ಚರ್ಮದ ಸೋಂಕು ಹಾಗೂ ವಯಸ್ಸಾದಂತೆ ಹೆಚ್ಚಾಗುವ ತೂಕ ಇವೆಲ್ಲವೂ ಕಾರಣವಾಗುತ್ತದೆ. ಕೆಲವೊಮ್ಮೆ ಖಾಸಗಿ ಅಂಗದ ಕಪ್ಪು ಕಲೆ ಸಂಭೋಗದ ವೇಳೆ ಮುಜುಗರವನ್ನುಂಟು ಮಾಡುತ್ತದೆ.

ಖಾಸಗಿ ಅಂಗದ ಕಪ್ಪನ್ನು ಹೋಗಲಾಡಿಸಲು ಮನೆ ಮದ್ದನ್ನು ಬಳಸಬಹುದು. ಜೇನುತುಪ್ಪ ಹಾಗೂ ತೆಂಗಿನ ಎಣ್ಣೆ ನಿಮಗೆ ನೆರವಾಗುತ್ತದೆ. ಒಂದು ಚಮಚ ತೆಂಗಿನ ಎಣ್ಣೆ ಹಾಗೂ 1 ಚಮಚ ಜೇನು ತುಪ್ಪವನ್ನು ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಮಾಡಿ. ಅದನ್ನು ಖಾಸಗಿ ಅಂಗಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಸ್ವಚ್ಚಗೊಳಿಸಿ. ಆ ನಂತ್ರ ರೋಸ್ ವಾಟರ್ ಹಚ್ಚಿ.

ಸೌತೆಕಾಯಿ ರಸ ತೆಗೆದು ಅದನ್ನು ಅಲೋವೆರಾ ರಸಕ್ಕೆ ಮಿಕ್ಸ್ ಮಾಡಿ ಹಚ್ಚಿಕೊಳ್ಳುತ್ತ ಬನ್ನಿ. ಇದು ಕೂಡ ಖಾಸಗಿ ಅಂಗವನ್ನು ಬೆಳ್ಳಗೆ ಮಾಡುತ್ತದೆ.

ಆಲೂಗಡ್ಡೆ ಕತ್ತರಿಸಿ ಅದನ್ನು ವೃತ್ತಾಕಾರದಲ್ಲಿ ಖಾಸಗಿ ಅಂಗಕ್ಕೆ ಮಸಾಜ್ ಮಾಡಿ. ಇದು ಕೂಡ ಬ್ಲೀಚ್ ನಂತೆ ಕೆಲಸ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read