ಕ್ರಿಕೆಟ್‌ ಜಗತ್ತಿನ ಇಂಟ್ರೆಸ್ಟಿಂಗ್‌ ಕಹಾನಿ; ಮದುವೆಗೂ ಮೊದಲೇ ತಂದೆಯಾದ ಆಟಗಾರರು….!

ಚಿತ್ರರಂಗದವರಂತೆ ಕ್ರಿಕೆಟಿಗರ ಬದುಕು ಕೂಡ ಬಹಳ ಕುತೂಹಲಕಾರಿಯಾಗಿರುತ್ತದೆ. ಲವ್‌ ಮ್ಯಾರೇಜ್‌, ಬ್ರೇಕಪ್‌, ವಿಚ್ಛೇದನ, ಮದುವೆಗೂ ಮುನ್ನವೇ ತಂದೆಯಾಗುವುದು ಹೀಗೆ ಅನೇಕ ಏರಿಳಿತಗಳಿಗೆ ಕ್ರಿಕೆಟಿಗರ ಬದುಕು ಸಾಕ್ಷಿಯಾಗಿದೆ. ಮದುವೆಗೆ ಮುಂಚೆಯೇ ತಂದೆಯಾದ ಕ್ರಿಕೆಟಿಗರು ಯಾರ್ಯಾರು ಅನ್ನೋದನ್ನು ನೋಡೋಣ.

ವಿನೋದ್‌ ಕಾಂಬ್ಳಿ : ಭಾರತ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ತಮ್ಮ ಮೊದಲ ಪತ್ನಿ ನೊಯೆಲಾ ಲೂಯಿಸ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಇದಾದ ಬಳಿಕ ಮಾಡೆಲ್ ಆಂಡ್ರಿಯಾ ಹೆವಿಟ್ ಜೊತೆ ಕಾಂಬ್ಳಿ ಡೇಟಿಂಗ್‌ ಮಾಡುತ್ತಿದ್ದರು. ಈ ವೇಳೆ ಕಾಂಬ್ಳಿ ಹಾಗೂ ಆಂಡ್ರಿಯಾಗೆ ಮಗನೂ ಜನಿಸಿದ್ದಾನೆ. ನಂತರ ಕಾಂಬ್ಳಿ ಆಕೆಯನ್ನು  ಮದುವೆಯಾದರು.

ಡೇವಿಡ್‌ ವಾರ್ನರ್‌ : ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ 2015ರಲ್ಲಿ ತಮ್ಮ ಗೆಳತಿ ಕ್ಯಾಂಡಿಸ್ ವಾರ್ನರ್ ಅವರನ್ನು ವಿವಾಹವಾದರು. ಆದರೆ ಮದುವೆಗೂ ಮುನ್ನವೇ ಅಂದರೆ 2014ರಲ್ಲಿ ದಂಪತಿ ಹೆಣ್ಣು ಮಗುವನ್ನು ಪಡೆದಿದ್ದಾರೆ.

ಕ್ರಿಸ್‌ ಗೇಲ್‌: ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರ ಹೆಸರೂ ಈ ಪಟ್ಟಿಯಲ್ಲಿದೆ. ಗೇಲ್ ತಮ್ಮ ಗೆಳತಿ ನತಾಶಾ ಜೊತೆ ಮದುವೆಗೆ ಮುಂಚೆಯೇ ತಂದೆಯಾಗಿದ್ದರು. ಇಬ್ಬರ ಮದುವೆಗೂ ಮುನ್ನವೇ ನತಾಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಕೇನ್‌ ವಿಲಿಯಮ್ಸನ್‌: ನ್ಯೂಜಿಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಮತ್ತು ಅವರ ಪತ್ನಿ ಸಾರಾ ರಹೀಮ್ ಕೂಡ ಮದುವೆಗೂ ಮೊದಲು ಪೋಷಕರಾದರು. ನಂತರ ಇಬ್ಬರೂ ವಿವಾಹವಾಗಿದ್ದಾರೆ. ಕಳೆದ ವರ್ಷ ಅವರು ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ.

ಜೋ ರೂಟ್‌: ಇಂಗ್ಲೆಂಡ್‌ನ ಮಾಜಿ ನಾಯಕ ಮತ್ತು ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್ ಕೂಡ ಮದುವೆಗೆ ಮುನ್ನ ತಂದೆಯಾಗಿದ್ದಾರೆ. ಜೋ ರೂಟ್ ಅವರ ಗೆಳತಿ ಕೆರ್ರಿ ಕಾಟ್ರೆಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೂಟ್, ಕಾಟ್ರೆಲ್ ಅವರನ್ನು ಇನ್ನೂ ಮದುವೆಯಾಗಿಲ್ಲ.

ಹಾರ್ದಿಕ್‌ ಪಾಂಡ್ಯ: ಟೀಂ ಇಂಡಿಯಾದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಕೂಡ ಮದುವೆಗೂ ಮೊದಲೇ ತಂದೆಯಾಗಿದ್ದಾರೆ. ಹಾರ್ದಿಕ್‌ ಹಾಗೂ ನತಾಶಾ ದಂಪತಿಗೆ ಗಂಡು ಮಗುವಾಗಿತ್ತು. ಇತ್ತೀಚೆಗಷ್ಟೆ ಹಾರ್ದಿಕ್‌, ನತಾಶಾ ಜೊತೆಗೆ ಹಸೆಮಣೆ ಏರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read