ಕೊಹ್ಲಿ ಹಿಡಿದ ಕ್ಯಾಚ್ ಕಂಡು ಅರೆಕ್ಷಣ ದಂಗಾದ ಉಭಯ ತಂಡದ ಆಟಗಾರರು; ವಿಡಿಯೋ ವೈರಲ್

ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರಿದೆ. 5 ವಿಕೆಟ್ ಗಳ ಗೆಲುವು ಸಾಧಿಸಿದೆ.

ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಸ್ಪಿನ್ ಬಿರುಗಾಳಿಗೆ ತತ್ತರಿಸಿದ ಕೆರಿಬಿಯನ್ ಪಡೆ ಅಲ್ಪ ಮೊತ್ತಕ್ಕೆ ಆಲ್ ಔಟ್ ಆಯಿತು. ಈ ಗೆಲುವಿನ ಮೂಲಕ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಕೆರಿಬಿಯನ್ ಪಡೆಯನ್ನು ಕೇವಲ 114 ರನ್ ಗೆ ಆಲ್ ಔಟ್ ಮಾಡುವಲ್ಲಿ ಭಾರತದ ಫೀಲ್ಡರ್ ಗಳು ಮಹತ್ವದ ಪಾತ್ರ ವಹಿಸಿದರು. ಅದರಲ್ಲಿಯೂ ವಿರಾಟ್ ಕೊಹ್ಲಿಯ ಒಂದು ಕ್ಯಾಚ್ ವಿಂಡೀಸ್ ತಂಡವನ್ನೇ ಕುಗ್ಗಿಸಿದ್ದು, ಕೊಹ್ಲಿಯ ಮನಮೋಹಕ ಕ್ಯಾಚ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಅದಾಗಲೇ ವೆಸ್ಟ್ ಇಂಡೀಸ್ 96 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 18ನೇ ಓವರ್ ನ ರವೀಂದ್ರ ಜಡೇಜಾ ಅವರ 4ನೇ ಎಸೆತದಲ್ಲಿ ಸ್ಪಿನ್ ಜಾದು ಅರಿಯಲು ವಿಫಲರಾದ ರೊಮರಿಯೊ ಶೆಫರ್ಡ್ ಸ್ಲಿಪ್ ನಲ್ಲಿದ್ದ ಕೊಹ್ಲಿಗೆ ಕ್ಯಾಚ್ ಇತ್ತು ನಿರ್ಗಮಿಸಿದರು.

ಸೆಕೆಂಡ್ ಸ್ಲಿಪ್ ನಲ್ಲಿ ನಿಂತಿದ್ದ ಕೊಹ್ಲಿ ಒಂದೇ ಕೈಯಲ್ಲಿ ಡೈವ್ ಬಿದ್ದು ಅದ್ಭುತವಾಗಿ ಕ್ಯಾಚ್ ಹಿಡಿದಿದ್ದಾರೆ. ಕೊಹ್ಲಿಯ ಈ ಅದ್ಭುತ ಕ್ಯಾಚ್ ಕಂಡು ಆಟಗಾರರು ಅರೆಕ್ಷಣ ದಂಗಾಗಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read