ಫೆಬ್ರವರಿ ಬಂದರೆ ಸಾಕು ಪ್ರೇಮಿಗಳಿಗೆ ಹಬ್ಬವೋ ಹಬ್ಬ…… ಇದೇ ತಿಂಗಳಂದು ಪ್ರೇಮಿಗಳ ದಿನವನ್ನ ಆಚರಿಸಲಾಗುತ್ತೆ. ಆದರೆ ಎಷ್ಟೋ ಜನ ಆ ಸಂದರ್ಭದಲ್ಲಿ ಪ್ರೇಮಿಗಳ ದಿನವನ್ನ ಒಬ್ಬಂಟಿಯಾಗಿಯೇ ಕಳೆಯುತ್ತಾರೆ. ಕಾರಣ ಅವರು ತಮ್ಮ ಪ್ರೇಮಿಯೊಂದಿಗೆ ಬ್ರೇಕ್ಅಪ್ ಮಾಡ್ಕೊಂಡು ಬಿಟ್ಟಿರ್ತಾರೆ.
ಬ್ರೇಕ್ ಅಪ್ ಆದ್ಮೇಲೆ ಎಲ್ಲ ಮುಗಿದು ಹೋಗುತ್ತಾ? ನೋ…… ಚಾನ್ಸೇ ಇಲ್ಲ. ಒಬ್ಬರನ್ನ ಕಂಡರೆ ಒಬ್ಬರು ಶಾಪ ಹಾಕ್ತಿರ್ತಾರೆ. ನಂಬರ್ ಬ್ಲಾಕ್ ಮಾಡ್ತಾರೆ. ವಾಟ್ಸ್ಅಪ್‌ನಲ್ಲಿ ನೆನಪಿಗೆ ಇಟ್ಟುಕೊಂಡ ಮೆಸೇಜ್ ಎಲ್ಲ ಡಿಲೀಟ್ ಮಾಡ್ಬಿಡ್ತಾರೆ. ಡಿಪಿ ತೆಗೆದು ಸ್ಟೆಟಸ್ ಹಾಗೂ ಎಫ್‌ಬಿಯಲ್ಲಿ ಅವರಿಗೆ ನಾಟುವಂತ ವಿಡಿಯೋ ಇಲ್ಲಾ ಮೆಸೇಜ್ ಹಾಕುತ್ತಾರೆ. ಈ ಮೂಲಕ ಸೇಡು ತೀರಿಸಿಕೊಳ್ಳೊದಕ್ಕೆ ಬೇರೆ ಬೇರೆ ಮಾರ್ಗ ಹುಡುಕ್ತಿರ್ತಾರೆ. ಆದರೂ ಸಮಾಧಾನ ಸಿಗದಿದ್ದವರಿಗೆ ಇಲ್ಲಿದೆ ಒಂದು ಸೂಪರ್ ಆಫರ್. ನಿಮ್ಮ ಹಳೆಯ ಪ್ರೇಮಿಯ ಹೆಸರನ್ನ ಈ ಜಿರಲೆಗೆ ಇಡಬಹುದು. ಈ ರೀತಿಯಾದರೂ ನಿಮ್ಮ ಸೇಡಿನ ಅಗ್ನಿ ಕೊಂಚ ಮಟ್ಟಿಗೆ ಶಾಂತ ಮಾಡಬಹುದು.
ಕೆನಡಾದ ಟೊರೆಂಟೋ ಪ್ರಾಣಿ ಸಂಗ್ರಹಾಲಯ ಇಂತಹದ್ದೊಂದು ವಿಚಿತ್ರ ಆಫರ್ ಬಿಟ್ಟಿದೆ. ಹಾಗಂತ ಕೇವಲ ನಿಮ್ಮ ಹಳೆಯ ಪ್ರೇಮಿಯ ಹೆಸರನ್ನ ಮಾತ್ರ ಇಡಬಹುದು ಅಂತಲ್ಲ. ನಿಮಗೆ ಯಾರನ್ನ ಕಂಡರೆ ಆಗುವುದಿಲ್ಲವೋ, ನಿಮಗೆ ಯಾರು ಕಿರಿಕಿರಿ ಕೊಟ್ಟಿರ್ತಾರೋ, ನಿಮಗೆ ಯಾರನ್ನ ಕಂಡರೆ ಇಷ್ಟ ಆಗೋಲ್ವೋ ಅವರೆಲ್ಲರ ಹೆಸರನ್ನ ಈ ಜಿರಳೆಗೆ ಇಡಬಹುದು. ಹಾಗಂತ ಈ ಅವಕಾಶ ನಿಮಗೆ ಫ್ರಿ ಆಗಿ ಸಿಗ್ತಿಲ್ಲ. ಅದಕ್ಕೆ ನೀವು ಟಿಕೆಟ್ ತೆಗೆದುಕೊಳ್ಳಬೇಕು. ಆ ಟಿಕೆಟ್‌ಗೆ ಎಷ್ಟು ದುಡ್ಡು ಅಂತಿರಾ? ಜಸ್ಟ್ 25 ಡಾಲರ್ ಅಷ್ಟೆ. ಅಂದ್ರೆ ಬರೋಬ್ಬರಿ 1507 ರೂಪಾಯಿ.
ಇದೊಂದು ವಿಭಿನ್ನ ಪ್ರಕಾರದ ಅಭಿಯಾನವಾಗಿದ್ದು, ಇದರ ಹೆಸರು ’ನೇಮ್ ಆಫರ್ ರೋಚ್’ ಇದೊಂದು ತಮಾಷೆಯ ಆಟವಾಗಿದ್ದು, ಇಲ್ಲಿ ದ್ವೇಷದ ಮಾತು, ಸಿಟ್ಟು, ಪ್ರತೀಕಾರ ಇಂತಹದ್ದಕ್ಕೆಲ್ಲ ಅವಕಾಶವಿಲ್ಲ ಎಂದು ಪ್ರಾಣಿ ಸಂಗ್ರಹಾಲಯ ಮೊದಲೇ ನಿಯಮದಲ್ಲಿ ಹೇಳಿದೆ. ಇದು ನಗ್ತಾ ನಗ್ತಾನೇ ನೋವನ್ನ ಮರೆಸುವ ಪ್ರಯತ್ನ ಎಂದು ಪ್ರಾಣಿ ಸಂಗ್ರಹಾಲಯದವರು ಹೇಳಿದ್ದಾರೆ.
ಇನ್ನೂ ಜಿರಳಗಳೆಂದ್ರೆ ಯಾರಿಗೆ ತಾನೇ ಅಸಹ್ಯ ಆಗೋಲ್ಲ ಹೇಳಿ. ಅದಕ್ಕೆ ಈ ಜಿರಳೆಗಳಿಗೆ ನಿಮಗೆ ಇಷ್ಟವಾಗದಿರುವವರ ಹೆಸರನ್ನ ಇಟ್ಟು ನಿಮಗೆ ನೀವು ಸಮಾಧಾನ ಮಾಡಿಕೊಳ್ಳಿ ಅನ್ನುವುದು ಈ ಅಭಿಯಾನದ ಮುಖ್ಯ ಉದ್ದೇಶ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು, ಕೆಲವರು ಈ ಆಟವನ್ನ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಕೆಲವರು ಜಿರಳೆಗೆ ಹೆಸರಿಟ್ಟ ತಕ್ಷಣ ನಮ್ಮ ನೋವೆಲ್ಲ ದೂರವಾಗಿ ಬಿಡುತ್ತಾ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಪ್ರೇಮಿಗಳ ದಿನಕ್ಕೆ ಹೊಸ ಆಟ ಅನೇಕರಿಗೆ ಖುಷಿಕೊಟ್ಟಿದ್ದಂತೂ ನಿಜ.
https://twitter.com/louvegh/status/1615078126274445313?ref_src=twsrc%5Etfw%7Ctwcamp%5Etweetembed%7Ctwterm%5E1615078126274445313%7Ctwgr%5Ee7b63d61709514a5d1582dc8f72f523e9baf4b93%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fyou-can-name-a-cockroach-after-your-ex-this-valentines-day-thanks-to-this-zoo-in-canada-2323945-2023-01-20
https://twitter.com/KarenMo86794020/status/1615330867018170370?ref_src=twsrc%5Etfw%7Ctwcamp%5Etweetembed%7Ctwterm%5E1615330867018170370%7Ctwgr%5Ee7b63d61709514a5d1582dc8f72f523e9baf4b93%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fyou-can-name-a-cockroach-after-your-ex-this-valentines-day-thanks-to-this-zoo-in-canada-2323945-2023-01-20
https://twitter.com/TargetInView/status/1615213719826599937?ref_src=twsrc%5Etfw%7Ctwcamp%5Etweetembed%7Ctwterm%5E1615213719826599937%7Ctwgr%5Ee7b63d61709514a5d1582dc8f72f523e9baf4b93%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fyou-can-name-a-cockroach-after-your-ex-this-valentines-day-thanks-to-this-zoo-in-canada-2323945-2023-01-20
https://twitter.com/Carolin59347528/status/1616081627947343873?ref_src=twsrc%5Etfw%7Ctwcamp%5Etweetembed%7Ctwterm%5E1616081627947343873%7Ctwgr%5Ee7b63d61709514a5d1582dc8f72f523e9baf4b93%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fyou-can-name-a-cockroach-after-your-ex-this-valentines-day-thanks-to-this-zoo-in-canada-2323945-2023-01-20