ಕೈಯಲ್ಲಿ ಹಣ ನಿಲ್ತಿಲ್ಲವೆಂದ್ರೆ ಗಣೇಶನಿಗೆ ಇದನ್ನು ಅರ್ಪಿಸಿ

ಬುಧವಾರ ಗಣೇಶನಿಗೆ ಪ್ರಿಯವಾದ ದಿನ. ಈ ದಿನ ಗಣೇಶನಿಗೆ ವಿಶೇಷ ಪೂಜೆ ಮಾಡಿದ್ರೆ ಫಲ ಪ್ರಾಪ್ತಿಯಾಗುತ್ತದೆ. ಗಣೇಶ ಬುದ್ದಿ ಹಾಗೂ ಜ್ಞಾನದ ದೇವರು. ಗಣೇಶನ ಆರಾಧನೆ ಮಾಡುವವರಿಗೆ ಜ್ಞಾನದ ವೃದ್ಧಿಯಾಗುತ್ತದೆ.

ಹಣ ಸಂಪಾದನೆಗೂ ಜ್ಞಾನ ಅತ್ಯಗತ್ಯ. ಬುದ್ದಿವಂತಿಕೆಯಿಂದ ಹಣ ಸಂಪಾದನೆ ಮಾಡಲು ಬಯಸುವವರು ಸರಿಯಾದ ವಿಧಾನದಲ್ಲಿ ಗಣೇಶನ ಆರಾಧನೆ ಮಾಡಬೇಕು.

ಮನೆಯಲ್ಲಿ ಎಂದೂ ಹಣ ನಿಲ್ಲುತ್ತಿಲ್ಲ ಎಂದಾದ್ರೆ ಹಸಿರು ಬಣ್ಣದ ಗಣೇಶ ಮೂರ್ತಿಯನ್ನು ಮನೆಗೆ ತನ್ನಿ. ಉತ್ತರ ದಿಕ್ಕಿಗೆ ಸ್ಥಾಪನೆ ಮಾಡಿ. ಪ್ರತಿ ದಿನ 11 ದರ್ಬೆಯನ್ನು ಗಣೇಶನಿಗೆ ಅರ್ಪಿಸಿ. ‘ಓಂ ನಮೋ ಭಗವತೆ ಗಜಾನನಾಯ’ ಮಂತ್ರವನ್ನು 108 ಬಾರಿ ಜಪಿಸಿ. ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಗಣೇಶನಿಗೆ ಹಳದಿ ಬಣ್ಣದ ಮೋದಕವನ್ನು ಅರ್ಪಿಸಿ. ಈ ಮೋದಕವನ್ನು ಮಕ್ಕಳಿಗೆ ನೀಡಿ.

ಹಳದಿ ಬಣ್ಣದ ಗಣೇಶ ಮೂರ್ತಿಯನ್ನು ಪೂರ್ವ ಭಾಗದಲ್ಲಿ ಸ್ಥಾಪನೆ ಮಾಡಿ ಪೂಜೆ ಮಾಡಿದ್ರೂ ಹಣದಲ್ಲಿ ವೃದ್ಧಿಯಾಗುತ್ತದೆ. ದೂಪ, ದೀಪದಿಂದ ಭಗವಂತನ ಪೂಜೆ ಮಾಡಬೇಕು. ಪ್ರತಿ ದಿನ ಹಳದಿ ಬಣ್ಣದ ಮೋದಕವನ್ನು ಅರ್ಪಿಸಬೇಕು. ಇದನ್ನು 27 ದಿನಗಳ ಕಾಲ ಮಾಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read