ಕೆಟ್ಟ ದೃಷ್ಟಿ, ಕೆಟ್ಟ ಗಾಳಿಯಿಂದ ತಪ್ಪಿಸಿಕೊಳ್ಳಲು ನೆರವಾಗುತ್ತೆ ಈ ಒಂದು ‘ವಸ್ತು’

Image result for lemon

ನಿಂಬೆ ಹಣ್ಣು ಸಾಮಾನ್ಯವಾಗಿ ಎಲ್ಲ ಕಡೆ ಸುಲಭವಾಗಿ ಸಿಗುತ್ತದೆ. ನಿಂಬೆ ಹಣ್ಣನ್ನು ಧಾರ್ಮಿಕ ಹಾಗೂ ತಾಂತ್ರಿಕ ಎರಡೂ ಕಾರ್ಯಗಳಿಗೆ ಬಳಸ್ತಾರೆ. ನಿಂಬೆ ಹಣ್ಣಿನ ಸಹಾಯ ಪಡೆದು ಕೆಟ್ಟ ದೃಷ್ಟಿ ಹಾಗೂ ಕೆಟ್ಟ ಗಾಳಿಯಿಂದ ತಪ್ಪಿಸಿಕೊಳ್ಳಬಹುದು.

ನಿಂಬೆ ಗಿಡ ಮನೆ ಮುಂದಿದ್ದರೆ ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶ ಮಾಡುವುದಿಲ್ಲ. ಹಾಗೆ ವಾಸ್ತು ದೋಷ ಕೂಡ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.

ಶನಿವಾರದ ದಿನ ಒಂದು ನಿಂಬೆ ಹಣ್ಣು ಹಾಗೂ ನಾಲ್ಕು ಲವಂಗ ತೆಗೆದುಕೊಂಡು ಶನಿ ದೇವಸ್ಥಾನಕ್ಕೆ ಹೋಗಿ. ನಿಂಬೆ ಹಣ್ಣಿಗೆ ಲವಂಗ ಚುಚ್ಚಿ ಹನುಮಾನ್ ಚಾಲೀಸ್ ಅಥವಾ ಹನುಮಂತನ ಮಂತ್ರವನ್ನು ಜಪಿಸಿ. ಯಶಸ್ಸಿಗಾಗಿ ಹನುಮಂತನಲ್ಲಿ ಪ್ರಾರ್ಥನೆ ಮಾಡಿ. ನಂತ್ರ ಶನಿ ದೇವರಿಗೆ ಪೂಜೆ ಮಾಡಿ ನಂತ್ರ ನಿಂಬೆ ಹಣ್ಣನ್ನು ಮನೆಗೆ ತಂದು ಪವಿತ್ರ ಸ್ಥಳದಲ್ಲಿಡಿ.

ಚಿಕ್ಕ ಮಕ್ಕಳಿಗೆ ದೃಷ್ಟಿ ತಗಲುವುದು ಸಾಮಾನ್ಯ. ಆಹಾರ ಸೇವನೆ ಕಡಿಮೆ ಮಾಡುವ ಮಕ್ಕಳು ಹೆಚ್ಚು ಅಳಲು ಶುರುಮಾಡ್ತಾರೆ. ಈ ವೇಳೆ ಕುಟುಂಬಸ್ಥರಿಗೆ ಚಿಂತೆ ಕಾಡೋದು ಸಹಜ. ಹಾಗಿರುವಾಗ ಒಂದು ನಿಂಬೆ ಹಣ್ಣನ್ನು ಅರ್ಧ ಕತ್ತರಿಸಿ. ಕತ್ತರಿಸಿದ  ಮಧ್ಯ ಭಾಗಕ್ಕೆ ಕಪ್ಪು ಎಳ್ಳನ್ನು ಹಾಕಿ. ನಂತ್ರ ಕಪ್ಪು ದಾರದಲ್ಲಿ ನಿಂಬೆ ಹಣ್ಣನ್ನು ಸುತ್ತಿ. ಕೈನಲ್ಲಿ ನಿಂಬೆ ಹಣ್ಣನ್ನು ಹಿಡಿದು ದೃಷ್ಟಿ ತಗುಲಿದ ಮಗುವಿಗೆ ವಿರುದ್ಧ ದಿಕ್ಕಿನಲ್ಲಿ 7 ಬಾರಿ ಸುತ್ತಿ ನಂತ್ರ ನಿರ್ಜನ ಪ್ರದೇಶದಲ್ಲಿ ನಿಂಬೆ ಹಣ್ಣನ್ನು ಎಸೆದು ಬನ್ನಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read