ಕುತ್ತಿಗೆ ಕೊಯ್ದು ಹೋದವನು ನೀನು, ನಿನ್ನಿಂದ ನಾನು ಪಾಠ ಕಲಿಯಬೇಕಾ ? ಸಚಿವ ನಾರಾಯಣಗೌಡ ವಿರುದ್ಧ ಏಕವಚನದಲ್ಲಿ HDK ವಾಗ್ದಾಳಿ

ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿರುವಂತೆಯೇ ಪಕ್ಷಗಳ ನಾಯಕರ ಆರೋಪ – ಪ್ರತ್ಯಾರೋಪ ಮುಂದುವರೆದಿದೆ. ಜೆಡಿಎಸ್ ವರಿಷ್ಠರು ಪಕ್ಷದಲ್ಲಿ ಯಾರನ್ನೂ ಬೆಳೆಯಲು ಬಿಡುವುದಿಲ್ಲ ಎಂಬ ಸಚಿವ ನಾರಾಯಣಗೌಡ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ನಾರಾಯಣಗೌಡ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು, ಕುತ್ತಿಗೆ ಕೊಯ್ದು ಹೋದವನು ನೀನು, ನಿನ್ನಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಗುಡುಗಿದರಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಕೆಆರ್ ಪೇಟೆ ಜನ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಹೇಳಿದರು.

ಅವರಿವರನ್ನು ಬೆಳೆಸಲು ನಾನು ನನ್ನ ಪಕ್ಷ ಹಾಳು ಮಾಡಿಕೊಳ್ಳಬೇಕಾ ಎಂದ ಕುಮಾರಸ್ವಾಮಿ, ಆತನ ನಡವಳಿಕೆ ನೋಡಿ ನಾನು ಎರಡನೇ ಬಾರಿ ಟಿಕೆಟ್ ಕೊಡಬಾರದಾಗಿತ್ತು. ಆದರೂ ಕೂಡ ಅವನಿಗೆ ಟಿಕೆಟ್ ಕೊಟ್ಟೆ. ಪಕ್ಷಾಂತರಿಯಾದ ಆತನಿಂದ ಪಾಠ ಹೇಳಿಸಿಕೊಳ್ಳಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read