ಕುಡಿತದ ಚಟ; ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಪತ್ನಿ ಕೊಲೆಗೆ ಯತ್ನಿಸಿ, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಪಿ; ಅಪ್ಪ-ಅಮ್ಮನ ಜಗಳ ಕಂಡು ಮನೆ ಬಿಟ್ಟು ಹೋದ ಬಾಲಕ

ಬೆಂಗಳೂರು: ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಪತಿ ಮಹಾಶಯ ಕೆಲಸ ಬಿಟ್ಟು ಮನೆಯಲ್ಲೇ ಇದ್ದು ಕುಡಿತದ ಚಟಕ್ಕೆ ದಾಸನಾಗಿದ್ದ. ಸಾಲದ್ದಕ್ಕೇ ಕುಡಿದು ಪತ್ನಿಗೆ ಕಿರುಕುಳ ನೀಡುತ್ತಿದ್ದನಲ್ಲದೇ ಸೈಕೋನಂತೆ ವರ್ತಿಸುತ್ತಿದ್ದ ಎನ್ನಲಾಗಿದೆ.

ಬೇಸತ್ತ ಪತ್ನಿ ಕೆಲಸಕ್ಕೆ ಹೋಗುವಂತೆ ಹೇಳಿದ್ದಾಳೆ ಇದೇ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಜಗಳ ಆರಂಭವಾಗಿ ಪತಿಮಹಾಶಯ ಪತ್ನಿಯ ತಲೆಯನ್ನು ಗೋಡೆಗೆ ಜಜ್ಜಿದ್ದಾನೆ. ಬಳಿಕ ಚಾಕುವಿನಿಂದ ತಾನೂ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಪ್ಪ-ಅಮ್ಮನ ಜಗಳ ಕಂಡು ತಬ್ಬಿಬ್ಬಾದ 12 ವರ್ಷದ ಮಗ ಮನೆ ಬಿಟ್ಟು ಹೋಗಿದ್ದಾನೆ.

ತುಮಕೂರು ನಿವಾಸಿಯಾದ ಹರ್ಷ 10 ವರ್ಷಗಳಿಂದ ಬೆಂಗಳೂರಿನ ಆರ್.ಆರ್.ನಗರದಲ್ಲಿ ವಾಸವಾಗಿದ್ದ. ಹರ್ಷ ಹಾಗೂ ಪತ್ನಿ ಸುಧಾರಾಣಿ ಇಬ್ಬರೂ ಸಾಫ್ಟ್ ವೇರ್ ಇಂಜಿನಿಯರ್. ಕೈತುಂಬಾ ಸಂಬಳ. ವರ್ಷದ ಹಿಂದೆ ಊರಲ್ಲಿದ್ದ ಜಮೀನು ಮಾರಿದ್ದ ಏಕಾಏಕಿ ಕೋಟ್ಯಂತರ ರೂಪಾಯಿ ಹಣ ಬಂದಿದೆ. ಹಣ ಬಂದಿದ್ದೇ ತಡ ಕೆಲಸ ಬಿಟ್ಟು ಮನೆಯಲ್ಲೇ ಕೂತ ಹರ್ಷ ದುಶ್ಚಟದ ದಾಸನಾಗಿದ್ದ. ಅಲ್ಲದೇ ಪತ್ನಿಗೆ ಬಾಯಿಗೆ ಬಂದಂತೆ ಮಾತನಾಡಿ ಹೊಡೆಯುವುದು, ಕಿರುಕುಳ ನೀಡುವುದು ಮಾಡುತ್ತಿದ್ದ. ಇದರಿಂದ ನೊಂದ ಪತ್ನಿ ಕುಡಿತ ಬಿಟ್ಟು ಕೆಲಸಕ್ಕೆ ಹೋಗುವಂತೆ ಬುದ್ಧಿ ಹೇಳಿದ್ದಾಳೆ. ಇಬ್ಬರ ನಡುವೆ ಜಗಳ ಆರಂಭವಾಗಿ ಪತ್ನಿಯ ತಲೆಯನ್ನು ಗೋಡೆಗೆ ಚಚ್ಚಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಧ್ಯ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪತ್ನಿ ಸಹೋದರ ನೀಡಿದ ದೂರಿನ ಹಿನ್ನೆಲೆಯಲ್ಲಿ ಹರ್ಷ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read