ಕಿವಿಯೊಳಗೆ ಗುಳ್ಳೆ ಮೂಡಿ ನೋವು ಕಾಡುತ್ತಿದ್ದರೆ ಕಡಿಮೆಯಾಗಲು ಇದನ್ನು ಹಚ್ಚಿ

ಕಿವಿಯೊಳಗೆ ಧೂಳು, ಕೊಳಕು ತುಂಬಿಕೊಂಡಾಗ ಅಲ್ಲಿ ಸೋಂಕು ತಗುಲಿ ಗುಳ್ಳೆಗಳು ಮೂಡುತ್ತವೆ. ಅವುಗಳು ನೋವು, ತುರಿಕೆಯನ್ನುಂಟು ಮಾಡುತ್ತದೆ. ಈ ಗುಳ್ಳೆಗಳನ್ನು ಹಾಗೂ ನೋವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ.

ಟೀ ಟ್ರೀ ಆಯಿಲ್ ನಲ್ಲಿರುವ ಅಂಶಗಳು ಉರಿಯೂತ ಮತ್ತು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆದಕಾರಣ ಈ ಎಣ್ಣೆಯನ್ನು ಹತ್ತಿಯಿಂದ ತೆಗೆದುಕೊಂಡು ಅದನ್ನು ಗುಳ್ಳೆಗಳಿಗೆ ಹಚ್ಚಿ ರಾತ್ರಿಯಿಡಿ ಹಾಗೇ ಬಿಡಿ. ಇದನ್ನು ಗುಳ್ಳೆ ಕಡಿಮೆಯಾಗುವವರೆಗೂ ಪ್ರತಿದಿನ ಮಾಡಿ.

ಮೊಟ್ಟೆಯ ಬಿಳಿಭಾಗವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಇದು ಗುಳ್ಳೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 1 ಚಮಚ ಮೊಟ್ಟೆಯ ಬಿಳಿ ಭಾಗಕ್ಕೆ ½ ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಗುಳ್ಳೆಗಳಿರುವ ಜಾಗಕ್ಕೆ ಹಚ್ಚಿ. 30 ನಿಮಿಷ ಬಿಟ್ಟು ವಾಶ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read