ಕಿತ್ತಳೆಯಷ್ಟೇ ಅಲ್ಲ ಸಿಪ್ಪೆಯಲ್ಲೂ ಇದೆ ನಮ್ಮ ಆರೋಗ್ಯದ ಗುಟ್ಟು…..!

ಭಾರತದಲ್ಲಿ ಕಿತ್ತಳೆ ಉತ್ಪಾದನೆ ಸಾಕಷ್ಟಿದೆ. ಹಾಗಾಗಿ ಬಹುತೇಕ ಜನರು ಕಿತ್ತಳೆಯನ್ನು ಸೇವನೆ ಕೂಡ ಮಾಡುತ್ತಾರೆ. ಕಿತ್ತಳೆಯ ಹುಳಿ-ಸಿಹಿ ರುಚಿ ಎಲ್ಲರನ್ನೂ ಆಕರ್ಷಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಫೋಲೇಟ್ ಆರೋಗ್ಯಕ್ಕೆ ಪ್ರಯೋಜನಕಾರಿ. ಸಾಮಾನ್ಯವಾಗಿ ನಾವು ಕಿತ್ತಳೆ ತೊಳೆಗಳನ್ನು ತಿನ್ನುತ್ತೇವೆ, ಸಿಪ್ಪೆಯನ್ನು ಎಸೆದುಬಿಡುತ್ತೇವೆ. ಆರೋಗ್ಯ ತಜ್ಞರ ಪ್ರಕಾರ ಹೀಗೆ ಮಾಡುವುದರಿಂದ ಸಿಪ್ಪೆಯಲ್ಲಿರುವ ಲಾಭಗಳು ನಮಗೆ ಸಿಗುವುದಿಲ್ಲ.

ಚರ್ಮಕ್ಕೆ ಒಳ್ಳೆಯದು:  ಕಿತ್ತಳೆ ಸಿಪ್ಪೆಯು ನಮ್ಮ ಚರ್ಮಕ್ಕೆ ವರದಾನ ಎಂದರೂ ತಪ್ಪೇನಿಲ್ಲ. ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ ಕಿತ್ತಳೆ ಸಿಪ್ಪೆ ರಾಮಬಾಣವಿದ್ದಂತೆ. ಕಿತ್ತಳೆ ಸಿಪ್ಪೆಯ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಈ ರೀತಿ ಮಾಡುವುದರಿಂದ ಮುಖದಲ್ಲಿ ಹೊಳಪು ಬರುತ್ತದೆ, ಕಲೆಗಳು ಕೂಡ ಮಾಯವಾಗುತ್ತವೆ.

ನಿದ್ದೆಗೆ ಸಹಕಾರಿ: ರಾತ್ರಿ ಚೆನ್ನಾಗಿ ನಿದ್ದೆ ಬರದೇ ಇದ್ದರೆ ಕಿತ್ತಳೆ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಕುದಿಸಿಕೊಂಡು ಕುಡಿಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ: ಕಿತ್ತಳೆ ಸಿಪ್ಪೆಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದಕ್ಕಾಗಿ ಕಿತ್ತಳೆ ಸಿಪ್ಪೆಯನ್ನು ಬಿಸಿ ನೀರಿನಲ್ಲಿ ತೊಳೆಸು ಸೇವನೆ ಮಾಡಬಹುದು. ಕೆಲವರು ಇದನ್ನು ಸಕ್ಕರೆ ಮತ್ತು ನಿಂಬೆಯೊಂದಿಗೆ ತಿನ್ನಲು ಇಷ್ಟಪಡುತ್ತಾರೆ.

ಹೇರ್ ಕಂಡಿಷನರ್: ನಾವು ಸಾಮಾನ್ಯವಾಗಿ ದುಬಾರಿ ಮತ್ತು ರಾಸಾಯನಿಕಯುಕ್ತ ಕಂಡೀಷನರ್‌ಗಳನ್ನು ಬಳಸುತ್ತೇವೆ. ಆದರೆ ಕಿತ್ತಳೆ ಸಿಪ್ಪೆಯು ಹೇರ್‌ ಕಂಡಿಷನರ್‌ನಂತೆ ಕೆಲಸ ಮಾಡುತ್ತದೆ. ಈ ಸಿಪ್ಪೆಯು ಕೂದಲನ್ನು ಶುದ್ಧೀಕರಿಸಬಲ್ಲ ಗುಣಗಳನ್ನು ಹೊಂದಿದೆ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಕೂದಲು ಹೊಳಪು ಪಡೆಯುತ್ತದೆ.

ಡ್ಯಾಂಡ್ರಫ್‌ನಿಂದ ಮುಕ್ತಿ: ಕೂದಲಿನಲ್ಲಿ ತಲೆಹೊಟ್ಟು ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ ಕಿತ್ತಳೆ ಸಿಪ್ಪೆಯನ್ನು ಬಳಸಿ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದರಲ್ಲಿ ತೆಂಗಿನ ಎಣ್ಣೆಯನ್ನು ಬೆರೆಸಿ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read