ಕಾರುಗಳ ಮಾರಾಟದಲ್ಲಿ ಮತ್ತೆ ನಂಬರ್‌ 1 ಪಟ್ಟಕ್ಕೇರಿದೆ ಈ ಕಂಪನಿ; ಮೇ ತಿಂಗಳಲ್ಲಿ ಭರ್ಜರಿ ವಹಿವಾಟು….!

ದೇಶದ ಅತಿದೊಡ್ಡ ಕಾರು ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಮೇ ತಿಂಗಳಿನಲ್ಲಿ ಭರ್ಜರಿ ವಹಿವಾಟು ನಡೆಸಿದೆ. ಸುಮಾರು 1,78,083 ಕಾರುಗಳನ್ನು ಮಾರುತಿ ಸುಜುಕಿ ಮಾರಾಟ ಮಾಡಿದೆ. ಕಂಪನಿಯ ಸೇಲ್ಸ್‌ 10 ಪ್ರತಿಶತದಷ್ಟು ಹೆಚ್ಚಾಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಮಾರುತಿ ಸುಜುಕಿ 1,61,413 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. 2023ರ ಮೇ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ, ಕಂಪನಿ 1,51,606 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಮಾರಾಟ ಪ್ರಮಾಣ  ಶೇಕಡಾ 13 ರಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಇದೇ ತಿಂಗಳಿನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 1,34,222 ಯುನಿಟ್‌ಗಳು ಬಿಕರಿಯಾಗಿದ್ದವು.

ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯ ಒಟ್ಟು ಪ್ರಯಾಣಿಕ ವಾಹನಗಳ ಮಾರಾಟವು 1,43,708 ಯುನಿಟ್‌ಗಳಿದ್ದು, 15 ಪ್ರತಿಶತದಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 1,24,474 ಯೂನಿಟ್‌ಗಳಾಗಿತ್ತು. ಕಂಪನಿಯ ಮಿನಿ ಕಾರುಗಳಾದ ಆಲ್ಟೊ ಮತ್ತು ಎಸ್-ಪ್ರೆಸ್ಸೋಗಳ ಮಾರಾಟವು 17,408 ಯುನಿಟ್‌ಗಳಿಂದ ಶೇ.30 ರಷ್ಟು ಕುಸಿತದೊಂದಿಗೆ 12,236 ಯುನಿಟ್‌ಗಳಿಗೆ ತಲುಪಿದೆ. ಆದರೆ  ಕಾಂಪ್ಯಾಕ್ಟ್ ಕಾರುಗಳಾದ ಸ್ವಿಫ್ಟ್, ಸೆಲೆರಿಯೊ, ಇಗ್ನಿಸ್, ಬಲೆನೊ ಮತ್ತು ಡಿಜೈರ್ ಮಾರಾಟವು 71,419 ಯುನಿಟ್‌ಗಳಷ್ಟಿದ್ದು, 5 ಪ್ರತಿಶತ ಏರಿಕೆಯಾಗಿದೆ.

ಕಳೆದ ವರ್ಷ ಇದೇ ತಿಂಗಳಲ್ಲಿ 67,947 ಯುನಿಟ್‌ಗಳು ಮಾರಾಟವಾಗಿದ್ದವು. ಇವುಗಳ ಹೊರತಾಗಿ ಮಧ್ಯಮ ಗಾತ್ರದ ಸೆಡಾನ್ ಸಿಯಾಜ್ ಮಾರಾಟವು 586 ರಿಂದ 992 ಯುನಿಟ್‌ಗಳಿಗೆ ಏರಿಕೆಯಾಗಿದೆ. ಯುಟಿಲಿಟಿ ವಾಹನಗಳಾದ ಬ್ರೆಝಾ, ಗ್ರ್ಯಾಂಡ್ ವಿಟಾರಾ ಮತ್ತು ಎರ್ಟಿಗಾ ಮಾರಾಟವು 65 ಪ್ರತಿಶತದಷ್ಟು ಹೆಚ್ಚಾಗಿದೆ, 46,243 ಯುನಿಟ್‌ಗಳನ್ನು ತಲುಪಿದೆ. ಇದು ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ 28,051 ಯುನಿಟ್‌ಗಳಾಗಿತ್ತು. ಆದರೆ ಕಂಪನಿಯ ರಫ್ತು ಮೇ ತಿಂಗಳಿನಲ್ಲಿ ಇಳಿಕೆಯಾಗಿದೆ. ಶೇ.3ರಷ್ಟು ಕುಸಿತದೊಂದಿಗೆ 26,477 ಯುನಿಟ್‌ಗಳಿಗೆ ಬಂದು ತಲುಪಿದೆ. ವರ್ಷದ ಹಿಂದೆ ಇದೇ ತಿಂಗಳಲ್ಲಿ 27,191 ಯೂನಿಟ್‌ಗಳಷ್ಟಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read