ಕಾಫಿ ಕಪ್ ನಲ್ಲಿ ಸುಲಭವಾಗಿ ಬೆಳೆಸಿ ಇಂಡೋರ್‌ ಪ್ಲಾಂಟ್

ಮನೆಯಲ್ಲಿ ಕಾಫಿ ಅಥವಾ ಟೀ ಪ್ರಿಯರಿದ್ದರೆ ಕುಡಿಯುವುದಕ್ಕೆಂದು ಕಪ್ ಗಳನ್ನು ತಂದಿಟ್ಟಿಕೊಂಡಿರುತ್ತಾರೆ.‌ ಹಳೆಯದಾದ,  ಕೈ ಜಾರಿನೋ ಅಥವಾ ಮಕ್ಕಳ ಕಿತಾಪತಿಯಿಂದಲೋ ತುಸು ಒಡೆದು ಹೋಗಿರುತ್ತದೆ. ಅಥವಾ ಅದರ ಹಿಡಿ ಮುರಿದಿರುತ್ತದೆ. ‌

ಇಂತಹ ಕಾಫಿ ಕಪ್ ಗಳನ್ನು ಸುಮ್ಮನೇ ಕಸದ ಡಬ್ಬಿಗೆ ಎಸೆಯುವ ಬದಲು ಮನೆಯ ಅಲಂಕಾರಕ್ಕೆ ಬಳಸಿಕೊಳ್ಳಬಹುದು. ಹಾಗೇ ಅದರಲ್ಲಿ ಮನೆಯ ಒಳಗೆ ನೆಡುವ ಗಿಡಗಳನ್ನು ನೆಡಬಹುದು. ಇಲ್ಲಿದೆ ನೋಡಿ ಹೇಗೆ ಇದರಲ್ಲಿ ಗಿಡ ಬೆಳೆಯಬಹುದು ಎಂದು.

ಮನೆಯ ಒಳಗೆ ನೆಡಬಹುದಾದ ಯಾವುದಾದರೂ ಗಿಡಗಳನ್ನು ತನ್ನಿ. ನಂತರ ಮಗ್/ ಕಪ್ ನ ಕೆಳಗಡೆ ನೆಲ್ಲಿಕಾಯಿ ಗಾತ್ರದ ಕಲ್ಲುಗಳನ್ನು 8 ಹಾಕಿ. ಹಾಗೇ ಸ್ವಲ್ಪ ಗಾರ್ಡನ್ ಗೆ ಬೇಕಿರುವ ಮಣ್ಣು ಹಾಗೇ ಕೋಕೋಪಿಟ್ ಅನ್ನು ಮಗ್ ನ ಅರ್ಧದಷ್ಟು ಹಾಕಿ.

ನಂತರ ಯಾವುದಾದರೂ ಸುಲಭವಾಗಿ ಬೆಳೆಯುವ, ಚಿಕ್ಕದಾಗಿ ಇರುವ ಗಿಡವನ್ನು ಮಗ್ ಒಳಗೆ ನೆಟ್ಟು ಸ್ವಲ್ಪ ಮಣ್ಣು ಸೇರಿಸಿ ನೀರು ಹಾಕಿ. ದಿನಕ್ಕೊಮ್ಮೆ ನೀರು ಹಾಕುತ್ತಲೇ ಇರಿ. ಎರಡು ವಾರದಲ್ಲಿ ಗಿಡ ಚೆನ್ನಾಗಿ ಬೆಳೆಯುವುದನ್ನು ನೀವು ನೋಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read