ಕಾಂತಿಯುತ ತ್ವಚೆ ಪಡೆಯಲು ಪರಿಣಾಮಕಾರಿ ಹಣ್ಣು ʼಪಪ್ಪಾಯʼ

ಪರಂಗಿ ಹಣ್ಣಿನಲ್ಲಿ ಉನ್ನತ ಮಟ್ಟದ ಆಂಟಿ ಆಕ್ಸಿಡೆಂಟ್, ವಿಟಮಿನ್ ಎ ಮತ್ತು ಪಪೈನ್ ಅನ್ನೋ ಅಂಶವಿದೆ. ಇದು ಚರ್ಮಕ್ಕೆ ತುಂಬಾ ಪರಿಣಾಮಕಾರಿ. ಕಲೆಗಳು ಹಾಗೂ ಮೊಡವೆಗಳನ್ನು ನಿವಾರಣೆ ಮಾಡುವಲ್ಲಿ ಇವು ತುಂಬಾ ಸಹಕಾರಿ.

ಮನೆಯಲ್ಲೇ ಕೆಲ ಪಪ್ಪಾಯ ಪ್ಯಾಕ್ ತಯಾರಿಸಿ ತ್ವಚೆಯ ಹೊಳಪು ಹೆಚ್ಚಿಸಿ.

* ಒಂದು ತುಂಡು ಪಪ್ಪಾಯಿಯನ್ನು ಪೇಸ್ಟ್ ಮಾಡಿ. ಇದಕ್ಕೆ ಒಂದು ಚಮಚ ಬೆಲ್ಲ ಮತ್ತು ಓಟ್ ಮೀಲ್ ಸೇರಿಸಿಕೊಳ್ಳಿ.

ಇದನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದು ಚರ್ಮವನ್ನು ಶುಚಿಗೊಳಿಸಿ ಕಾಂತಿ ಹೆಚ್ಚಿಸುತ್ತದೆ.

* ಅರ್ಧ ಬಟ್ಟಲು ಪಪ್ಪಾಯ ಹಣ್ಣನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಎರಡು ಚಮಚ ಹಾಲು ಹಾಗೂ ಒಂದು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಸಿ. ತಯಾರಿಸಿದ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಲೇಪಿಸಿ. ಹದಿನೈದು ನಿಮಿಷಗಳ ನಂತರ ಮುಖ ತೊಳೆಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read