ನೀಲಿ ಹೂವುಗಳ ಸಮುದ್ರದಿಂದ ಅಲಂಕರಿಸಲ್ಪಟ್ಟ ಕಣಿವೆಯ ಈ ಅದ್ಭುತ ಸೌಂದರ್ಯವನ್ನು ನೋಡಿ. ಇತ್ತೀಚೆಗೆ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಹರಿ ಚಂದನಾ ಅವರು ಹಂಚಿಕೊಂಡ ವೈರಲ್ ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು, ಕಣಿವೆ ಸಾಮಾಜಿಕ ಮಾಧ್ಯಮದಲ್ಲಿ ಸಂವೇದನೆಯಾಗಿದೆ.
ಸುಂದರವಾದ ವರ್ಣಚಿತ್ರದಂತೆ ಇದು ಕಾಣಿಸುತ್ತದೆ. ಈ ನೈಸರ್ಗಿಕ ಅದ್ಭುತವನ್ನು ನೋಡಿ ಮನಸಾರೆ ತಲೆದೂಗಬೇಕಿದೆ.
ಇಡೀ ಬೆಟ್ಟಗಳನ್ನು ಆವರಿಸಿರುವ ಹೂವುಗಳು ಪ್ರಕಾಶಮಾನವಾದ ನೀಲಿ ಆಕಾಶದ ಹಿನ್ನೆಲೆಯಲ್ಲಿ ಅರಳುತ್ತವೆ. ಅದ್ಭುತ ದೃಶ್ಯವನ್ನು ತೋರಿಸಲು ಕ್ಯಾಮೆರಾ ಅತ್ತಿತ್ತ ಚಲಿಸಲಾಗಿದೆ. ಇಳಿಜಾರಿನ ಮಧ್ಯದಲ್ಲಿ ದೊಡ್ಡ ಮರದ ನೆರಳಿನ ಕೆಳಗೆ ಸಣ್ಣ ಹೂವುಗಳ ನೋಟವು ವಿಶೇಷವಾಗಿ ಮೋಡಿ ಮಾಡುತ್ತದೆ.
ಯಾರೋ ಕಲಾವಿದ ಬಿಡಿಸಿದ ಚಿತ್ರದಂತೆ ಕಂಗೊಳಿಸುವ ಈ ನೋಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಲಘುವಾದ ಗಾಳಿಗೆ ಹೂವಿನ ರಾಶಿಗಳು ಅಲ್ಲಾಡುವುದನ್ನು ನೋಡುವುದೇ ಸೊಗಸು. ಇದಕ್ಕೆ 25 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ಥಹರೇವಾರಿ ಕಮೆಂಟ್ಗಳನ್ನು ಹಾಕುತ್ತಿದ್ದಾರೆ.
https://twitter.com/harichandanaias/status/1631157599176646657?ref_src=twsrc%5Etfw%7Ctwcamp%5Etweetembed%7Ctwterm%5E1631157599176646657%7Ctwgr%5E2587691d70824365d0e0b80a6e9261db5c67a385%7Ctwcon%5Es1_&ref_url=https%3A%2F%2Fwww.news18.com%2Fbuzz%2Fblue-sky-on-earth-japans-majestic-valley-of-flowers-is-a-sight-for-sore-eyes-7210849.html