ಕರ್ಟನ್ ಬಣ್ಣ ಬದಲಿಸುತ್ತೆ ಮನೆ ಸುಖ – ಶಾಂತಿ

Vastu tips for curtains remove the troubles from life every color says something different pur - Vastu: जीवन से परेशानियों को दूर करने के लिए घर में लगाएं ऐसे पर्दे, हर रंग

ಪ್ರತಿಯೊಬ್ಬರು ಮನೆಗೆ ಬಣ್ಣ ಬಣ್ಣದ ಕರ್ಟನ್ ತರ್ತಾರೆ. ಕಿಟಕಿ, ಬಾಗಿಲುಗಳಿಗೆ ಕರ್ಟನ್ ಹಾಕ್ತೇವೆ. ಮನೆಯಲ್ಲಿ ಹಾಕುವ ಕರ್ಟನ್ ಗೂ ಮನೆ ಸುಖ-ಸಂತೋಷಕ್ಕೂ ಸಂಬಂಧವಿದೆ. ಕರ್ಟನ್ ಬಣ್ಣ ನಮ್ಮ ಭಾವನೆಗಳು ಮತ್ತು ಮನಸ್ಸಿನ ವಿಚಾರಗಳ ಮೇಲೆ ಪ್ರಭಾವ ಬೀರುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ವಾಸ್ತು ಪ್ರಕಾರ ಮನೆಯ ದಕ್ಷಿಣ ದಿಕ್ಕಿಗೆ ಕೆಂಪು ಬಣ್ಣದ ಕರ್ಟನ್ ಹಾಕಬೇಕು. ಇದರಿಂದ ಕುಟುಂಬದಲ್ಲಿ ಬಾಂಧವ್ಯ ಹೆಚ್ಚುತ್ತದೆ. ಕೆಂಪು ಬಣ್ಣ ಶೌರ್ಯ ಮತ್ತು ಶಕ್ತಿಯ ಪ್ರತೀಕವಾಗಿದೆ.

ಗಂಡ ಹೆಂಡತಿಯ ನಡುವೆ ಪ್ರೀತಿ ಕಡಿಮೆಯಾದರೆ ಮಲಗುವ ಕೋಣೆಯಲ್ಲಿ ಕೇಸರಿ, ನೀಲಿ ಅಥವಾ ಗುಲಾಬಿ ಬಣ್ಣದ ಕರ್ಟನ್ ಹಾಕಬೇಕು. ಮಲಗುವ ಕೋಣೆಯಲ್ಲಿ ಕೆಂಪು ಬಣ್ಣದ ಕರ್ಟನ್ ಹಾಕಬಾರದು. ಏಕೆಂದರೆ ಕೆಂಪು ಬಣ್ಣ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಂಸಾರದಲ್ಲಿ ಕಲಹವಿದ್ದರೆ ಮನೆಯ ಉತ್ತರ ದಿಕ್ಕಿನಲ್ಲಿರುವ ಕೋಣೆಗೆ ನೀಲಿ ಬಣ್ಣದ ಕರ್ಟನ್ ಹಾಕಬೇಕು. ಈ ಬಣ್ಣ ಧೈರ್ಯ, ಶಾಂತಿಯನ್ನು  ನೀಡುತ್ತದೆ. ವಾಸ್ತು ಪ್ರಕಾರ ಈ ಬಣ್ಣದ ಕರ್ಟನನ್ನು ಮೆಡಿಟೇಶನ್ ರೂಮ್, ಲಿವಿಂಗ್ ರೂಮ್, ಸ್ಟಡಿ ರೂಮ್ ಮತ್ತು ಬೆಡ್ ರೂಮ್ ಗಳಲ್ಲಿ ಹಾಕಬೇಕು.

ಮನೆಯಲ್ಲಿ ಭಕ್ತಿ, ಜ್ಞಾನ, ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಲು ಹಳದಿ ಬಣ್ಣದ ಕರ್ಟನ್ ಹಾಕಬೇಕು.

ವಾಸ್ತು ಪ್ರಕಾರ, ಸಾಲದಿಂದ ಕಂಗೆಟ್ಟಿರುವವರು ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಬಣ್ಣದ ಕರ್ಟನ್ ಹಾಕಬೇಕು.

ಸತತ ಪರಿಶ್ರಮದ ನಂತರವೂ ನಿಶ್ಚಿತ ಫಲ ಸಿಗದೇ ಇದ್ದಲ್ಲಿ ಮನೆಯ ಪಶ್ಚಿಮ ದಿಕ್ಕಿನಲ್ಲಿ ಬಿಳಿ ಬಣ್ಣದ ಕರ್ಟನ್ ಹಾಕಿ.

ವಾಸ್ತು ಪ್ರಕಾರ, ಬಿಳಿ ಬಣ್ಣ ಶಾಂತಿಯ ಸಂಕೇತ. ಬೆಡ್ ರೂಮ್ ಪಶ್ಚಿಮ ದಿಕ್ಕಿಗೆ ಇದ್ದರೆ  ಬಿಳಿ ಅಥವಾ ನಸು ಬಿಳಿ ಬಣ್ಣದ ಕರ್ಟನ್ ಹಾಕಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read