ಕಬ್ಬಿಣಾಂಶದ ಕೊರತೆ ನೀಗಿಸುತ್ತೆ ಬಸಳೆ ಸೊಪ್ಪು

ಬಸಳೆ ಸೊಪ್ಪಿನ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಇದರ ಸೇವನೆಯಿಂದ ದೇಹಕ್ಕಾಗುವ ಪ್ರಯೋಜನಗಳು ಅಪರಿಮಿತ. ಹಾಗಾಗಿ ಯಾವುದೇ ಸೊಪ್ಪಿನಿಂದ ದೂರವಿದ್ದರೂ ಬಸಳೆಯಿಂದ ಮಾತ್ರ ದೂರವಿರದಿರಿ.

ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ. ಪೊಟ್ಯಾಶಿಯಂ ಸೇರಿದಂತೆ ಹಲವಾರು ಖನಿಜಾಂಶಗಳಿವೆ. ಇದನ್ನು ಪಲ್ಯ, ಸಾಂಬಾರು ರೂಪದಲ್ಲಿ ಸೇವಿಸುವ ಮೂಲಕ ಬಾಯಿ ಹುಣ್ಣಿನಿಂದ ಹಿಡಿದು ರಕ್ತಹೀನತೆಯಂಥ ಸಮಸ್ಯೆಗಳವರೆಗೆ ಹಲವು ಅನಾರೋಗ್ಯಗಳಿಂದ ಮುಕ್ತಿ ಪಡೆಯಬಹುದು.

 

ವಾರಕ್ಕೊಮ್ಮೆ ನಿಮ್ಮ ಊಟದ ಮೆನುವಿನಲ್ಲಿ ಬಸಳೆ ಸೊಪ್ಪನ್ನು ಸೇರಿಸಿಕೊಂಡರೆ ಸಾಕು, ಹೃದಯಕ್ಕೆ ಸಂಬಂಧಿಸಿದ ಎಲ್ಲಾ ರೋಗಗಳನ್ನು ಔಷಧ ರಹಿತವಾಗಿಯೇ ಗುಣಪಡಿಸಿಕೊಳ್ಳಬಹುದು. ನಿಮ್ಮ ದೈನಂದಿನ ಮಾನಸಿಕ ಒತ್ತಡವನ್ನೂ ನಿವಾರಿಸುವ ಗುಣ ಬಸಳೆಗಿದೆ.

ಅನೀಮಿಯಾ ಸಮಸ್ಯೆ ದೂರ ಮಾಡುವ ಇದು ಮೆದುಳಿನ ಆರೋಗ್ಯವನ್ನೂ ರಕ್ಷಿಸುತ್ತದೆ. ಗರ್ಭಿಣಿಯರು ನಿತ್ಯ ಇದನ್ನು ಸೇವಿಸುವುದರಿಂದ ರಕ್ತ ಹೀನತೆ ಅಥವಾ ಕಬ್ಬಿಣಾಂಶದ ಕೊರತೆಯಂಥ ಸಮಸ್ಯೆ ಕಾಡದು. ಮಕ್ಕಳಿಗೂ ಇದನ್ನು ಸೇವಿಸಲು ಕೊಡುವುದರಿಂದ ಅವರನ್ನು ಕಾಡುವ ಹಲವು ಸಮಸ್ಯೆಗಳು ಹತ್ತಿರವೂ ಸುಳಿಯವು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read