ಕಪ್ಪಾದ ಬೆಳ್ಳಿ ಆಭರಣಗಳನ್ನು ಕೇವಲ 5 ನಿಮಿಷಗಳಲ್ಲಿ ಶುಚಿಗೊಳಿಸಿ, ಫಳಫಳ ಹೊಳೆಯುವಂತೆ ಮಾಡುತ್ತೆ ಈ ಸರಳ ವಿಧಾನ

ಬೆಳ್ಳಿಯ ಆಭರಣಗಳನ್ನು ಧರಿಸದೆಯೇ ಹಾಗೇ ಇರಿಸಿದಾಗ ಕ್ರಮೇಣ ಹೊಳಪು ಕಳೆದುಕೊಳ್ಳುತ್ತವೆ. ನಿಧಾನವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಗಾಳಿಯಲ್ಲಿ ಬೆಳ್ಳಿ ಮತ್ತು ಗಂಧಕದ ನಡುವಿನ ರಾಸಾಯನಿಕ ಕ್ರಿಯೆಯಿಂದಾಗಿ ಇದು ಸಂಭವಿಸುತ್ತದೆ. ಕಪ್ಪಾದ ಬೆಳ್ಳಿಯನ್ನು ಸ್ವಚ್ಛಗೊಳಿಸಲು ಸಾಮಾನ್ಯವಾಗಿ ನಾವು ಆಭರಣ ವ್ಯಾಪಾರಿಗೆ ನೀಡುತ್ತೇವೆ.

ಹೀಗೆ ಮಾಡುವುದರಿಂದ ಸಮಯ ಮತ್ತು ಹಣ ಎರಡೂ ವ್ಯರ್ಥ. ಕೆಲವೊಂದು ಸುಲಭದ ವಿಧಾನಗಳ ಮೂಲಕ ಮನೆಯಲ್ಲಿಯೇ ಕೇವಲ 5 ನಿಮಿಷಗಳಲ್ಲಿ ಕಪ್ಪಾದ ಬೆಳ್ಳಿಯನ್ನು ನೀವು ಸ್ವಚ್ಛಗೊಳಿಸಬಹುದು, ಅದು ಮತ್ತೆ ಹೊಳಪು ಪಡೆದುಕೊಳ್ಳುವಂತೆ ಮಾಡಬಹುದು.

ಪಾತ್ರೆ ತೊಳೆಯುವ ಸೋಪ್‌

ಮೊದಲು ಬೆಚ್ಚಗಿನ ನೀರಿನಲ್ಲಿ ಕೆಲವು ಹನಿಗಳಷ್ಟು ಡಿಶ್‌ ವಾಶ್‌ ಲಿಕ್ವಿಡ್‌ ಅಥವಾ ಪಾತ್ರೆ ತೊಳೆಯುವ ಸೋಪ್‌ ಅನ್ನು ಹಾಕಿ. ನಂತರ ಬೆಳ್ಳಿ ವಸ್ತುಗಳನ್ನು ಸುಮಾರು 5-10 ನಿಮಿಷಗಳ ಕಾಲ ಈ ನೀರಿನಲ್ಲಿ ಮುಳುಗಿಸಿ. ಅವುಗಳ ಮೇಲೆ ಸಂಗ್ರಹವಾದ ಕೊಳೆಯನ್ನು ಸ್ವಚ್ಛಗೊಳಿಸಲು ಮೃದುವಾದ ಬ್ರಿಸ್ಟಲ್ ಬ್ರಷ್ ಅನ್ನು ಬಳಸಿ. ಚೆನ್ನಾಗಿ ತೊಳೆದು ಹತ್ತಿ ಬಟ್ಟೆಯಿಂದ ಒರೆಸಿಬಿಡಿ.

ಟೂತ್‌ ಪೇಸ್ಟ್‌

ಹಳೆಯ ಟೂತ್ ಬ್ರಷ್‌ಗೆ ಸ್ವಲ್ಪ ಪೇಸ್ಟ್ ಹಾಕಿಕೊಂಡು ಅದರಿಂದ ಬೆಳ್ಳಿಯ ಆಭರಣಗಳ ಮೇಲೆ ಚೆನ್ನಾಗಿ ಉಜ್ಜಿ. ನಂತರ ಅವುಗಳನ್ನು ಬಿಸಿ ನೀರಿನಲ್ಲಿ ಹಾಕಿ ಮತ್ತು ಸ್ವಲ್ಪ ಸಮಯದವರೆಗೆ ಹಾಗೇ ಬಿಡಿ. ಬಳಿಕ ಸ್ವಚ್ಛವಾಗಿ ತೊಳೆದು ಒಣಗಿಸಿ.

ಡುಗೆ ಸೋಡಾ

ಸ್ವಲ್ಪ ಅಡುಗೆ ಸೋಡಾವನ್ನು ನೀರಿಗೆ ಬೆರೆಸಿ. ಸಿದ್ಧಪಡಿಸಿದ ಪೇಸ್ಟ್‌ ಅನ್ನು ಬೆಳ್ಳಿ ಪಾತ್ರೆ ಮತ್ತು ಆಭರಣಗಳ ಮೇಲೆ ಹಚ್ಚಿ ಲಘುವಾಗಿ ಕೈಗಳಿಂದ ಉಜ್ಜುತ್ತಾ ಬನ್ನಿ. ಸುಮಾರು 10-15 ನಿಮಿಷಗಳ ಕಾಲ ಅದನ್ನು ಒಣಗಲು ಬಿಡಿ. ನಂತರ ಅದನ್ನು ತೊಳೆದು ಹತ್ತಿ ಬಟ್ಟೆ ಅಥವಾ ಟವೆಲ್‌ನಿಂದ ಒರೆಸಿ.

ಹೇರ್‌ ಕಂಡಿಷನರ್

ಬೆಳ್ಳಿಯ ಆಭರಣಗಳ ಮೇಲೆ ಕೂದಲು ಕಂಡಿಷನರ್ ಅನ್ನು ಅನ್ವಯಿಸಿ. ನಂತರ ಮೃದುವಾದ ಬ್ರಷ್‌ನ ಸಹಾಯದಿಂದ ಅದನ್ನು ಉಜ್ಜಿರಿ. ಹೀಗೆ ಮಾಡುವುದರಿಂದ ಆಭರಣಗಳ ಮೇಲೆ ಸಂಗ್ರಹವಾದ ಕಪ್ಪು ಬಣ್ಣವನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read