ಕಪ್ಪಾದ ಅಂಡರ್ ಆರ್ಮ್ಸ್ ಬೆಳ್ಳಗಾಗಿಸಲು ಹಚ್ಚಿ ಈ ಮನೆಮದ್ದು

ಅಂಡರ್ ಆರ್ಮ್ಸ್ ನಲ್ಲಿ ಹೆಚ್ಚು ಬೆವರು ಬರುವುದರಿಂದ ಅಲ್ಲಿ ಬ್ಯಾಕ್ಟೀರಿಯಾ ಹುಟ್ಟಿಕೊಂಡು ಆ ಸ್ಥಳವನ್ನು ಕಪ್ಪಾಗಿಸುತ್ತವೆ.

ಇದರಿಂದ ಸ್ಲಿವ್ ಲೆಸ್, ನಿಮ್ಮ ಇಷ್ಟದ ಡ್ರೆಸ್ ಗಳನ್ನು ಹಾಕಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಕಪ್ಪಾದ ಅಂಡರ್ ಆರ್ಮ್ಸ್ ನ್ನು ಬೆಳ್ಳಗಾಗಿಸಲು ಈ ಮನೆಮದ್ದನ್ನು ಹಚ್ಚಿ.

*1 ಸೌತೆಕಾಯಿ ತಿರುಳಿಗೆ 1 ಚಿಟಿಕೆ ಅರಶಿನ, 1 ಚಮಚ ಬೇಕಿಂಗ್ ಪೌಡರ್ ಮಿಕ್ಸ್ ಮಾಡಿ ಅದಕ್ಕೆ ಕೆಲವು ಹನಿ ನಿಂಬೆ ರಸ ಬೆರೆಸಿ ಈ ಪೇಸ್ಟ್ ನ್ನು ಅಂಡರ್ ಆರ್ಮ್ಸ್ ಗೆ ಹಚ್ಚಿ ಚೆನ್ನಾಗಿ ಉಜ್ಜಿ. ಬಳಿಕ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ಪ್ರತಿದಿನ ಮಾಡಿದರೆ ಬೇಗ ಫಲಿತಾಂಶ ಸಿಗುತ್ತದೆ.

*1 ನಿಂಬೆ ರಸ, 1 ಚಮಚ ಜೇನುತುಪ್ಪ, 1 ಚಮಚ ಮೊಸರು ಇವಿಷ್ಟನ್ನು ಮಿಕ್ಸ್ ಮಾಡಿ ಅಂಡರ್ ಆರ್ಮ್ಸ್ ಗೆ ಹಚ್ಚಿ 20 ನಿಮಿಷ ಬಿಟ್ಟು ಒಣಗಿದ ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ವಾರಕ್ಕೆ 2 ಬಾರಿ ಬಳಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read