ಕಪ್ಪಗಿನ ದಟ್ಟವಾದ ಹುಬ್ಬಿಗೆ ಇಲ್ಲಿದೆ ಮನೆ ಮದ್ದು

ಈರುಳ್ಳಿ ಅಡುಗೆ ರುಚಿ ಹೆಚ್ಚಿಸುವ ಜೊತೆಗೆ ಸೌಂದರ್ಯವರ್ಧಕವೂ ಹೌದು.

ಇದ್ರಲ್ಲಿರುವ ಸಲ್ಫರ್, ಸೆಲೆನಿಯಂ, ವಿಟಮಿನ್ ಬಿ ಹುಬ್ಬನ್ನು ಸುಂದರ ಹಾಗೂ ಬಲಪಡಿಸುತ್ತವೆ.

ನಿಮ್ಮ ತೆಳುವಾದ ಹುಬ್ಬು ನಿಮ್ಮ ಮುಖದ ಸೌಂದರ್ಯವನ್ನು ಹಾಳು ಮಾಡ್ತಿದೆ ಎಂದಾದ್ರೆ ಈರುಳ್ಳಿ ಬಳಸಿ ದಟ್ಟವಾದ, ಕಪ್ಪನೆಯ ಹುಬ್ಬನ್ನು ನಿಮ್ಮದಾಗಿಸಿಕೊಳ್ಳಿ.

ಹುಬ್ಬಿನ ಸೌಂದರ್ಯ ಹೆಚ್ಚಿಸಿಕೊಳ್ಳಲು ಬೇಕಾಗುವ ಪದಾರ್ಥ :

ಒಂದು ಈರುಳ್ಳಿ

ವಿಟಮಿನ್ ಇ ಎಣ್ಣೆ

ಮನೆ ಮದ್ದು ಮಾಡುವ ವಿಧಾನ :

ಈರುಳ್ಳಿ ಕತ್ತರಿಸಿ ರಸ ತೆಗೆಯಿರಿ. ಅದಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ನಲ್ಲಿರುವ ವಿಟಮಿನ್ ಇ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಈ ಮಿಶ್ರಣವನ್ನು ಹುಬ್ಬಿಗೆ ಹಚ್ಚುವ ಮೊದಲು ಹುಬ್ಬನ್ನು ಸ್ವಚ್ಛ ಮಾಡಿಕೊಳ್ಳಿ. ನಂತ್ರ ಹತ್ತಿ ಸಹಾಯದಿಂದ ಈ ಮಿಶ್ರಣವನ್ನು ಹುಬ್ಬಿಗೆ ಹಚ್ಚಿ 10 ನಿಮಿಷ ಬಿಡಿ. ಎರಡು ದಿನಕ್ಕೊಮ್ಮೆ ಈ ಮಿಶ್ರಣವನ್ನು ಹಚ್ಚುತ್ತ ಬರಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read