ಕಂಫರ್ಟ್ ಪಾದರಕ್ಷೆ ಧರಿಸದಿದ್ದರೆ ‌ಕಾಲು ನೋವು ಸಮಸ್ಯೆ ಕಾಡಬಹುದು ಎಚ್ಚರ…..!

ಚಪ್ಪಲ್, ಸ್ಯಾಂಡಲ್, ಶೂ, ಹೀಗೆ ನಾನಾ ಬಗೆಯ ಪಾದರಕ್ಷೆಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲೂ ಋತುವಿಗೆ ತಕ್ಕಂತೆ ಪಾದರಕ್ಷೆಗಳು ಕೂಡಾ ಬದಲಾಗ್ತಿರುತ್ತೆ. ಪಾದರಕ್ಷೆಗಳು ನಮ್ಮ ವ್ಯಕ್ತಿತ್ವವನ್ನ ಪ್ರತಿಬಿಂಬಿಸುವ ಹಾಗಾಗಿದೆ.

ಎಷ್ಟೋ ಕಂಪನಿಗಳಲ್ಲಿ ಇಂಟರ್ವ್ಯೂಗೆ ಹೋದಾಗ ಪಾದರಕ್ಷೆಯ ಆಧಾರದ ಮೇಲೆ ವ್ಯಕ್ತಿಯ ವಯಸ್ಸು, ಆರ್ಥಿಕ ಸ್ಥಿತಿ ಮತ್ತು ಸಾಮರ್ಥ್ಯವನ್ನು ಕೂಡಾ ಅಳೆದು ಬಿಡ್ತಾರೆ. ಆದಾಗ್ಯೂ ಈ ಪಾದರಕ್ಷೆಗಳನ್ನು ಧರಿಸುವಾಗ ಪಾದಗಳಿಗೆ ಅನುಕೂಲವಾಗಿರುವಂತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಉಪಯೋಗಿಸಿದರೆ ಒಳಿತು.

ನೀವು ಧರಿಸುವ ಪಾದರಕ್ಷೆಗಳು ಏನಾದರೂ ಕಂಫರ್ಟ್ ಇಲ್ಲದೇ ಇದ್ದಲ್ಲಿ ಅವು ನಿಮ್ಮ ನಡಿಗೆಯನ್ನೇ ಹಾಳು ಮಾಡಿ. ಅಷ್ಟೆ ಅಲ್ಲ ನಿಮ್ಮ ದೇಹದ ಚಲನವಲನ ಕೂಡಾ ಪಾದರಕ್ಷೆಗಳು ನಿರ್ಧರಿಸುತ್ತೆ. ಪಾದರಕ್ಷೆಯನ್ನ ಧರಿಸಿ ಹೆಜ್ಜೆ ಹಾಕುವಾಗ ಒಂದು ವಿಷಯವನ್ನ ಗಮನದಲ್ಲಿಡಬೇಕು. ನಿಮ್ಮ ಹಿಮ್ಮಡಿ ನೆಲದ ಮೇಲೆ ಇಡಬೇಕು ನಂತರ ಪಾದದ ಉಳಿದ ಭಾಗವನ್ನ ನೆಲದ ಮೇಲೆ ಊರಬೇಕು. ಹಾಗೆಯೇ ಇಟ್ಟು ಪಾದವನ್ನ ಎತ್ತುವಾಗ ಮೊದಲು ಹಿಮ್ಮಡಿಯನ್ನ ಎತ್ತಿ ನಂತರ ಪಾದವನ್ನ ಸಂಪೂರ್ಣವಾಗಿ ಮೇಲಕ್ಕೆತ್ತಬೇಕು.

ಒಂದು ಉತ್ತಮವಾದ ಶೂ ನಿಮಗೆ ಆರಾಮದಾಯಕವಾಗಿರುತ್ತೆ. ಆದರೆ ಅದೇ ಶೂ ನಿಮ್ಮ ಕಾಲಿಗೆ ಏನಾದರೂ ಬಿಗಿಯಾಗಿದ್ರೆ ಅದು ನಿಮ್ಮ ಕಾಲಿಗೆ ಸೂಕ್ತ ಅಲ್ಲ ಅಂತಾ ಅರ್ಥ. ಅಷ್ಟೆ ಅಲ್ಲ ಅದು ನಿಮ್ಮ ಕಾಲಿಗೆ ಹಾಗೂ ಕಾಲಿನ ಸ್ನಾಯುಗಳಿಗೆ ಅತ್ಯಂತ ಅಪಾಯಕಾರಿ. ಆದ್ದರಿಂದ ಯಾವುದೇ ರೀತಿಯ ಪಾದರಕ್ಷೆ ಖರೀದಿಸುವಾಗ ಎಲ್ಲ ವಿಷಯವನ್ನು ಗಮನದಲ್ಲಿಟ್ಟು ಆಯ್ಕೆ ಮಾಡಿಕೊಳ್ಳಬೇಕು.

ಯಾವುದೋ ಒಂದು ಶೂ ಖರೀದಿಸಿದರೆ ಆಯ್ತು ಅಂತೇನಾದ್ರೂ ನೀವು ಖರೀದಿಸಿದ್ದೇ ಆದರೆ ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ನೀವೇ ತಂದುಕೊಳ್ತಿರಾ. ಇದು ಕಾಲಿನ ಉಗುರುಗಳಿಗೆ ತೊಂದರೆಯಾಗೋದಲ್ಲದೆ, ಮೋಣಕಾಲು ಮತ್ತು ಕೀಲುಗಳ ನಡುವೆ ಹೆಚ್ಚಿನ ಒತ್ತಡವನ್ನ ತರುತ್ತದೆ. ಮಾಂಸಖಂಡಗಳ ಸೆಳೆತ, ಹಿಮ್ಮಡಿಗಳಲ್ಲಿ ನೋವು, ಹಿಮ್ಮಡಿ ಮೂಳೆಯಲ್ಲಿ ಒತ್ತಡ, ಪಾದಗಳಲ್ಲಿ ಊತ, ಕಾಲಿನ ಬೆರಳುಗಳಲ್ಲಿ ಬಾವು ಹೀಗೆ ಒಂದೊಂದು ಸಮಸ್ಯೆಗಳು ಕಾಡುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read