ಔಷಧಗಳ ಆಗರ ಎಳನೀರು

ಎಳನೀರಿನ ಸೇವನೆಯಿಂದ ದೇಹ ತಂಪಾಗುವುದು ಮಾತ್ರವಲ್ಲ, ಇದರಿಂದ ನಿಮಗೆ ತಿಳಿದಿರದ ಹಲವು ಕಾಯಿಲೆಗಳಿಗೆ ಪರಿಹಾರ ದೊರೆಯುತ್ತದೆ.

ಎಳನೀರು ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ದೇಹ ಡಿ ಹೈಡ್ರೇಶನ್ ಆಗುವುದನ್ನು ತಪ್ಪಿಸುತ್ತದೆ. ಸಕ್ಕರೆ ಬೆರೆಸಿದ ಇತರ ಹಣ್ಣಿನ ಪಾನೀಯಗಳಿಗಿಂತ ಎಳನೀರು ಬಹಳ ಒಳ್ಳೆಯದು. ಜಿಮ್ ಗೆ ಹೋಗಿ ಬಂದ ಬಳಿಕ ಎಳನೀರು ಕುಡಿಯುವುದು ಬಹಳ ಒಳ್ಳೆಯದು.

ರಕ್ತದೊತ್ತಡವನ್ನು ನಿಯಂತ್ರಿಸಿ ದೇಹದ ಪೊಟ್ಯಾಷಿಯಮ್ ಅಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಇದು ನೈಸರ್ಗಿಕವಾಗಿಯೂ ಕಡಿಮೆ ಕ್ಯಾಲರಿ ಹೊಂದಿದ್ದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಇದರಿಂದ ಟಾಕ್ಸಿನ್ ಹೊರ ಹಾಕಬಹುದು.

ಗ್ಯಾಸ್ಟ್ರಿಕ್ ಸಮಸ್ಯೆಗೂ ಎಳನೀರು ಮದ್ದಾಗಬಲ್ಲದು. ಖನಿಜ ಮತ್ತು ಪೊಟ್ಯಾಸಿಯಮ್ ಹೇರಳವಾಗಿರುವ ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ಮೂತ್ರಪಿಂಡ ಮತ್ತು ಹೊಟ್ಟೆ ಉರಿ ಸಮಸ್ಯೆ ಇರುವವರು ಎಳನೀರು ಸೇವಿಸಬೇಕು. ಅಜೀರ್ಣದೊಂದಿಗೆ ಮಲಬದ್ಧತೆ ಇರುವವರಿಗೂ ಇದು ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read